alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ಭಾರತೀಯ ಮೂಲದ ವೈದ್ಯ

ಸ್ನೇಹಿತರೊಬ್ಬರ ಮದುವೆಗೆಂದು ಭಾರತಕ್ಕೆ ಬಂದಿದ್ದ ಭಾರತೀಯ ಮೂಲದ ಅಮೆರಿಕನ್ ವೈದ್ಯರೊಬ್ಬರು ವಾಪಾಸ್ ದೆಹಲಿ-ನ್ಯೂಯಾರ್ಕ್ ವಿಮಾನದಲ್ಲಿ ತೆರಳುತ್ತಿರುವ ವೇಳೆ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ವಿಮಾನದಲ್ಲಿದ್ದ ಮತ್ತೊಬ್ಬರೊಂದಿಗೆ ಸೇರಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.

ವಿಮಾನ 35 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ 41 ವರ್ಷದ ಟಯೂನ್ ಗನ್ಡಿಪ್ ಎಂಬವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ವಿಮಾನ ಸಿಬ್ಬಂದಿ, ಪ್ರಯಾಣಿಕರ ಪೈಕಿ ಯಾರಾದರೂ ವೈದ್ಯರಿದ್ದಲ್ಲಿ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಭಾರತೀಯ ಮೂಲದ ವೈದ್ಯ ಡಾ. ಸಿಜ್ ಹೇಮಲ್ ಹಾಗೂ ಮತ್ತೊಬ್ಬರು ತಕ್ಷಣ ಮಹಿಳೆ ಬಳಿ ಧಾವಿಸಿದ್ದು, ಆಕೆಯ ಆರೋಗ್ಯ ಸ್ಥಿತಿ ಮೇಲೆ ನಿರಂತರವಾಗಿ ನಿಗಾ ಇಟ್ಟಿದ್ದಾರೆ.

ಮಾರ್ಗ ಮಧ್ಯದಲ್ಲೇ ಸನಿಹದ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲು ಪೈಲಟ್ ಮುಂದಾಗಿದ್ದು, ಆದರೆ ಮಹಿಳೆ ಆರೋಗ್ಯ ಸ್ಥಿತಿ ಸಮಾಧಾನಕರವಾಗಿದ್ದ ಕಾರಣ ನ್ಯೂಯಾರ್ಕ್ ಗೆ ತೆರಳಲು ತೊಂದರೆಯೇನಿಲ್ಲವೆಂದು ವೈದ್ಯರು ಹೇಳಿದ್ದು, ಕಡೆಗೆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ-ಮಗು ಆರೋಗ್ಯವಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿದ ಮಹಿಳೆ, ಆಸ್ಪತ್ರೆಯಲ್ಲಿ ಯಾವ ರೀತಿ ಚಿಕಿತ್ಸೆ ನೀಡುತ್ತಾರೋ ಅಂತಹುದೇ ಚಿಕಿತ್ಸೆ ತನಗೆ ವಿಮಾನದಲ್ಲಿ ಸಿಕ್ಕಿದ್ದು, ವೈದ್ಯರಿದ್ದ ಕಾರಣ ನಾನು ಯಾವುದೇ ಆತಂಕಕ್ಕೊಳಗಾಗಿರಲಿಲ್ಲವೆಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...