alex Certify
ಕನ್ನಡ ದುನಿಯಾ       Mobile App
       

Kannada Duniya

ವಿಯೆಟ್ನಾಂನಲ್ಲಿ ಡಜನ್ ಒಪ್ಪಂದಗಳಿಗೆ ಸಹಿ

modi-main

ಹನೋಯ್: ಪ್ರಧಾನಿ ನರೇಂದ್ರ ಮೋದಿ, ವಿಯೆಟ್ನಾಂ ಪ್ರವಾಸ ಕೈಗೊಂಡಿದ್ದು, ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗಿದೆ. ಅಧ್ಯಕ್ಷರ ನಿವಾಸದಲ್ಲಿ ಮೋದಿ ಅವರಿಗೆ ಗಣ್ಯರು ಸ್ವಾಗತ ನೀಡಿದ್ದು, ಬಾಲಕಿಯೊಬ್ಬಳು ಹೂಗುಚ್ಛ ನೀಡಿದ್ದಾಳೆ.

ನಂತರ ನರೇಂದ್ರ ಮೋದಿ ವಿಯೆಟ್ನಾಂ ಜನಾನುರಾಗಿ ನಾಯಕ ಹೊ ಚಿನ್ ಗೆ ಗೌರವ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿಯೆಟ್ನಾಂ ಜೊತೆಗೆ ಕ್ಷಿಪಣಿ, ಆರೋಗ್ಯ, ರಕ್ಷಣೆ ಮೊದಲಾದ 12 ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಕಳೆದ 15 ವರ್ಷಗಳಿಂದ ಭಾರತದ ಪ್ರಧಾನಿಗಳು ವಿಯೆಟ್ನಾಂಗೆ ಭೇಟಿ ನೀಡಿರಲಿಲ್ಲ. 15 ವರ್ಷಗಳ ನಂತರ ಮೋದಿ ಭೇಟಿ ನೀಡಿದ್ದು, ವಿಯೆಟ್ನಾಂ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ವಿಯೆಟ್ನಾಂ ಪ್ರವಾಸ ಮುಗಿದ ನಂತರ, ನರೇಂದ್ರ ಮೋದಿ ಅವರು, ಜಿ-20 ರಾಷ್ಟ್ರಗಳ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಹನೋಯ್ ನಿಂದ ಚೀನಾಕ್ಕೆ ಪ್ರವಾಸ ಮುಂದುವರೆಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...