alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರಿಟಿಷರ ನಾಡಲ್ಲೇ ತಿರಂಗಾ ಹಾರಿಸಿದ ಟೀಮ್ ಇಂಡಿಯಾ

ಭಾರತದ ಕ್ರಿಕೆಟ್ ತಂಡ ಈಗ ಇಂಗ್ಲೆಂಡ್ ನಲ್ಲಿ ಬೀಡುಬಿಟ್ಟಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿಗಾಗಿ ತೆರಳಿರುವ ಟೀಮ್ ಇಂಡಿಯಾ ಸದ್ಯ ನಟ್ಟಿಂಗ್ ಹ್ಯಾಮ್ನಲ್ಲಿದೆ. ಆಗಸ್ಟ್ 18ರಿಂದ ಆತಿಥೇಯ ಇಂಗ್ಲೆಂಡ್ ಮತ್ತು ಭಾರತದ ನಡುವೆ ಮೂರನೇ ಟೆಸ್ಟ್ ಪಂದ್ಯ ಶುರುವಾಗಲಿದೆ. ಇದರ ನಡುವೆ ಟೀಮ್ ಇಂಡಿಯಾ ಆಟಗಾರರು ಬ್ರಿಟಿಷರ ನೆಲದಲ್ಲೇ ಸ್ವಾತಂತ್ರ್ಯೋತ್ಸವದ ದಿನದಂದು ತಿರಂಗಾ ಹಾರಿಸಿದ್ದಾರೆ.

ನಟ್ಟಿಂಗ್ ಹ್ಯಾಮ್ನ ಹೊಟೇಲ್ ನಲ್ಲಿ ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಕೋಚ್ ರವಿಶಾಸ್ತ್ರಿ ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿ ಧ್ವಜಾರೋಹಣ ಮಾಡಿದ್ದಾರೆ. ನಂತರದಲ್ಲಿ ಎಲ್ಲರೂ ರಾಷ್ಟ್ರಗೀತೆಯನ್ನು ಹಾಡಿದ್ದಾರೆ.

ಆನಂತರದಲ್ಲಿ ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ಪರವಾಗಿ ಎಲ್ಲರಿಗೂ ಸ್ವಾತಂತ್ರ ದಿನದ ಶುಭಾಶಯಗಳನ್ನು ಕೋರಿದ್ದಾರೆ. ಈಗಾಗ್ಲೇ ಟೆಸ್ಟ್ ಸರಣಿಯ ಎರಡು ಪಂದ್ಯಗಳನ್ನು ಸೋತಿರುವ ಭಾರತ ನಟ್ಟಿಂಗ್ ಹ್ಯಾಮ್ ಟೆಸ್ಟ್ ಮೂಲಕ ಬೌನ್ಸ್ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...