alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ane-afrika

ದಕ್ಷಿಣ ಆಫ್ರಿಕಾದ ಕ್ರೂಗರ್ ನ್ಯಾಷನಲ್ ಪಾರ್ಕ್ ನಲ್ಲಿ ದೈತ್ಯ ಆನೆಯೊಂದು ಪೊಲೀಸ್ ವಾಹನದ ಮೇಲೆ ದಾಳಿ ಮಾಡಲು ಮುಂದಾದ ಘಟನೆ ನಡೆದಿದೆ.

ಕ್ರೂಗರ್ ನ್ಯಾಷನಲ್ ಪಾರ್ಕ್ ಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರನ್ನು ವಾಹನದಲ್ಲಿ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ.

ಪಾರ್ಕ್ ನಲ್ಲಿ ಪ್ರವಾಸಿಗರು ಹಾಗೂ ಪೊಲೀಸ್ ವಾಹನಗಳು ತೆರಳುವಾಗ, ಕಾಡು ನಾಯಿಗಳು ನಡು ರಸ್ತೆಯಲ್ಲಿಯೇ ಮಾಂಸವನ್ನು ತಿನ್ನುವ ದೃಶ್ಯ ಕಂಡಿದೆ.

ಗುಂಪಾಗಿದ್ದ ಹತ್ತಾರು ನಾಯಿಗಳು ಕಚ್ಚಾಡುತ್ತಿರುವಾಗ ಪೊದೆಯೊಂದರ ಮರೆಯಲ್ಲಿದ್ದ ದೈತ್ಯ ಕಾಡಾನೆ ರಸ್ತೆಗೆ ನುಗ್ಗಿದೆ. ಅಲ್ಲಿದ್ದ ನಾಯಿಗಳನ್ನು ಓಡಿಸಿದೆ.

ಸಮೀಪದಲ್ಲೇ ನಿಂತಿದ್ದ ಪೊಲೀಸ್ ವಾಹನದ ಮೇಲೆ ನುಗ್ಗಲು ಯತ್ನಿಸಿದೆ. ಚಾಲಕ ವಾಹನವನ್ನು ಹಿಂದಕ್ಕೆ ತಂದರೂ ಭಾರೀ ಗಾತ್ರದ ಆನೆ ದಾಳಿಗೆ ಮುಂದಾಗಿ, ಕೊನೆಗೆ ತೆರಳಿದೆ. ಈ ಭಯಾನಕ ದೃಶ್ಯಗಳನ್ನು ಪೊಲೀಸ್ ವಾಹನದ ಹಿಂಬದಿಯಲ್ಲೇ ಇದ್ದ ಪ್ರವಾಸಿಗರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...