alex Certify
ಕನ್ನಡ ದುನಿಯಾ       Mobile App
       

Kannada Duniya

ದಿಂಬಿನ ಕವರ್ ನಲ್ಲಿ ಭಾರೀ ಸಾಹಸ ಮಾಡಿದ್ದಾಳೆ ಮಹಿಳೆ

snake-in-pillow-case_650x400_51496994839

ಮನೆಯಲ್ಲಿ ಒಂದು ಹಲ್ಲಿ, ಜಿರಳೆ ನೋಡಿದ್ರೂ ಎಷ್ಟೋ ಜನರು ಹೆದರಿ ಮೂಲೆಯಲ್ಲಿ ಕುಳಿತುಕೊಳ್ತಾರೆ. ಅಂಥದ್ರಲ್ಲಿ ಭಾರೀ ಗಾತ್ರದ ಭಯಂಕರ ಹಾವೊಂದು ಮನೆಯ ಕೋಣೆಯಲ್ಲಿ ಪ್ರತ್ಯಕ್ಷವಾದ್ರೆ ಪರಿಸ್ಥಿತಿ ಹೇಗಿರಬೇಡ ಹೇಳಿ? ಅಮೆರಿಕದ ನಾರ್ತ್ ಕೆರೊಲಿನಾದ ಮನೆಯೊಂದರಲ್ಲೂ ಅದೇ ರೀತಿ ಹಾವು ಸೇರಿಕೊಂಡಿತ್ತು.

ಲಿವಿಂಗ್ ರೂಮ್ ನಲ್ಲಿದ್ದ ಹಾವನ್ನು ನೋಡಿದ ಸನ್ ಶೈನ್ ಮ್ಯಾಕ್ ಕರಿ ಎಂಬ ಮಹಿಳೆ ಹೆದರಿ ಓಡಲಿಲ್ಲ. 6 ಅಡಿ ಉದ್ದದ ಹಾವನ್ನು ತಲೆದಿಂಬಿನ ಕವರ್ ಒಂದರ ಸಹಾಯದಿಂದ ತಾನೇ ಹಿಡಿದಿದ್ದಾಳೆ. ಪಿಲ್ಲೋ ಕವರ್ ನಲ್ಲೇ ಹಾವನ್ನು ತುಂಬಿಕೊಂಡು ಮನೆಯ ಹೊರಕ್ಕೆ ಒಯ್ದಿದ್ದಾಳೆ.

ಸನ್ ಶೈನ್ ಹಾವು ಹಿಡಿಯುವ ದೃಶ್ಯವನ್ನು ವಿಡಿಯೋ ಮಾಡಲಾಗಿದೆ. ಜೂನ್ 1ರಂದು ಅಪ್ ಲೋಡ್ ಆಗಿರೋ ಈ ವಿಡಿಯೋವನ್ನು 3.6 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. 37,000 ಜನರು ಶೇರ್ ಮಾಡಿದ್ದಾರೆ. ಸಾವಿರಾರು ಕಮೆಂಟ್ಸ್ ಬಂದಿದ್ದು, ಎಲ್ಲರೂ ಮಹಿಳೆಯ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...