alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕದಲ್ಲಿ ಭಾರತೀಯನ ಬಂಧನ, ಕಾರಣ ಕೇಳಿದ್ರೆ….

ಒಂದು ತಿಂಗಳ ಮಗು ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. 34 ವರ್ಷದ ದಿವ್ಯ ಪಟೇಲ್ ಬಂಧಿತ ಆರೋಪಿ. ಈತ 1 ತಿಂಗಳ ಪ್ರಾಯದ ತನ್ನ ಮಗನನ್ನು ಕಾರಿನ ಹಿಂಬದಿ ಸೀಟಿನಲ್ಲಿ ಮಲಗಿಸಿದ್ದ. ಮಗುವಿನಲ್ಲಿ ಚಲನೆಯಿಲ್ಲ ಅನ್ನೋದು ಗೊತ್ತಾದರೂ ಆಸ್ಪತ್ರೆಗೆ ಕರೆದೊಯ್ಯಲಿಲ್ಲ.

ನವೆಂಬರ್ 18ರಂದು ದಿವ್ಯ ಪಟೇಲ್ ನ ಪತ್ನಿ 911ಗೆ ಕರೆ ಮಾಡಿ ತನ್ನ ಒಂದು ತಿಂಗಳ ಮಗು ಉಸಿರಾಡುತ್ತಿಲ್ಲ ಎಂದಿದ್ಲು. ಮಗು ಪಾರ್ಕಿಂಗ್ ಲಾಟ್ ನಲ್ಲಿ ತಂದೆಯ ಜೊತೆಗೆ ಕಾರಿನಲ್ಲಿದೆ ಅಂತಾ ತಿಳಿಸಿದ್ಲು. ಕೂಡಲೇ ಪೊಲೀಸರು ದಿವ್ಯ ಪಟೇಲ್ ಗೆ ಕರೆ ಮಾಡಿ ಮಗುವಿನ ಬಗ್ಗೆ ವಿಚಾರಿಸಿದ್ದಾರೆ.

ಆದ್ರೆ ಆತ ಪೊಲೀಸರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲಿಲ್ಲ, ತಾನು ಎಲ್ಲಿದ್ದೇನೆ ಎಂಬ ಮಾಹಿತಿಯನ್ನೂ ನೀಡಲಿಲ್ಲ. ಅರ್ಧ ಗಂಟೆ ಕಳೆದ ಬಳಿಕ ಮನೆಗೆ ಮರಳಿದ್ದ. ಕಾರಿನ ಹಿಂಬದಿ ಸೀಟಿನಲ್ಲಿದ್ದ 1 ತಿಂಗಳ ಮಗು ಸಾವನ್ನಪ್ಪಿತ್ತು. ಕೂಡಲೇ ದಿವ್ಯ ಪಟೇಲ್ ನನ್ನು ಬಂಧಿಸಿದ ಪೊಲೀಸರು, ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು.

ಆದ್ರೆ ಮಗು ಮೃತಪಟ್ಟಿರೋದಾಗಿ ವೈದ್ಯರು ದೃಢಪಡಿಸಿದ್ರು. ಮಗು ನಿಶ್ಚಲವಾಗಿದೆ, ಉಸಿರಾಡುತ್ತಿಲ್ಲ ಅನ್ನೋದು ಗೊತ್ತಾಗಿದ್ದರೂ ತಂದೆ ದಿವ್ಯ ಪಟೇಲ್ ಯಾಕೆ ಆಸ್ಪತ್ರೆಗೆ ಕರೆದೊಯ್ದಿಲ್ಲ ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...