alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರಿಗೆ ಅನಾಮಿಕ ನೀಡಿದ ಬಾಕ್ಸ್ ನಲ್ಲಿ ಏನಿತ್ತು ಗೊತ್ತಾ…?

ಲಂಡನ್ ನ ಒಂದು ಪೊಲೀಸ್ ಠಾಣೆಗೆ ಪಾರ್ಸಲ್ ಬಾಕ್ಸ್ ಬಂದಿತ್ತು. ಪೊಲೀಸರು ಆ ಬಾಕ್ಸ್ ತೆರೆಯುತ್ತಿದ್ದಂತೆ ಕೋಲಾಹಲ….ಬಾಕ್ಸ್ ನಲ್ಲಿ ಆರು ಅಡಿ ಉದ್ದದ ಬಿಳಿ ಹಾವನ್ನು ನೋಡಿದ ಪೊಲೀಸರಿಗೆ ಭಯ.. ಕೊಂಚ ಹೊತ್ತು ನಾರ್ಥಂಬ್ರಿಯಾ ಪೊಲೀಸ್ ಠಾಣೆ ಆತಂಕದ ಗೂಡಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಮೇಲೆ ಪೊಲೀಸರು ನೆಮ್ಮದಿಯ ನಿಟ್ಟುಸಿರುಬಿಟ್ಟರು. ಈ ಬಿಳಿ ಹಾವು ಅಲ್ಬೇನೊ ಎನ್ನುವರಿಗೆ ಸೇರಿದ್ದಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ನು ವಿಚಾರಣೆಯ ವೇಳೆ, ಬಿಳಿ ಹಾವು ರಸ್ತೆಯಲ್ಲಿ ಓಡಾಡುತ್ತಿತ್ತು ಎನ್ನಲಾಗಿದೆ.

ಇದನ್ನು ಕಂಡು ದಾರಿಹೋಕ ಹಾಗೂ ಆತನ ಸ್ನೇಹಿತ ಅದನ್ನು ಕಷ್ಟಪಟ್ಟು ಹಿಡಿದು ಒಂದು ಪೆಟ್ಟಿಗೆಗೆ ಹಾಕಿದ್ದಾರೆ. ಅಷ್ಟೇ ಅಲ್ಲ ಆ ಪೆಟ್ಟಿಗೆಯನ್ನು ಪೊಲೀಸ್ ಠಾಣೆಗೆ ತಂದು ಇಟ್ಟಿದ್ದಾರೆ. ಪೊಲೀಸ್ ಠಾಣೆಯಲ್ಲಿ ಮೂಡಿದ್ದ ಆತಂಕ ಕೊನೆಗೆ ತಣ್ಣಗಾಗಿದೆ. ಪೊಲೀಸರು ಈ ಬಿಳಿ ಹಾವಿಗೆ ಹ್ಯಾರಿ ಎಂದು ಹೆಸರು ಇಟ್ಟಿದ್ದಾರೆ. ಸದ್ಯ ಪೊಲೀಸರು ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ಬಿಳಿ ಹಾವುಗಳು ಕಾಣಿಸೋದು ವಿರಳ. ಈ ಹಾವುಗಳು ಬೇರೆ ಹಾವುಗಳಷ್ಟು ವಿಷವನ್ನು ಕಾರೋದಿಲ್ಲ. ಇದಕ್ಕೂ ಮೊದಲು ಆಸ್ಟ್ರೇಲಿಯಾದಲ್ಲಿ ಬಿಳಿ ಹಾವು ಪ್ರತ್ಯಕ್ಷವಾಗಿದ್ದನ್ನು ಸ್ಮರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...