alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಈ ‘ಗೋಲ್ಡನ್‌ ಬ್ರಿಡ್ಜ್‌’

ವಿಯೆಟ್ನಾಂನಲ್ಲಿ ಕಳೆದ ಜೂನ್‌ನಲ್ಲಿ ಉದ್ಘಾಟನೆಯಾದ ಗೋಲ್ಡನ್‌ ಬ್ರಿಡ್ಜ್‌ ಪ್ರವಾಸಿ ಕೇಂದ್ರ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಗಿದೆ. ಇದರಿಂದಾಗಿ ಗೋಲ್ಡನ್‌ ಬ್ರಿಡ್ಜ್‌ ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಕಾಂಕ್ರೀಟ್‌ ನ ದೊಡ್ಡದಾದ 2 ಕೈಗಳ ನಡುವೆ, ಸೇತುವೆ ನಿರ್ಮಿಸಲಾಗಿದ್ದು, ಇದಕ್ಕೆ ಚಿನ್ನದ ಬಣ್ಣ ನೀಡಲಾಗಿದೆ. ಕಾಂಕ್ರೀಟ್‌ ಕೈಗಳಿಗೆ ಅಲ್ಲಲ್ಲಿ ಹಸಿರಿನ ಸಿಂಚನವಿದ್ದರೆ, ಇಡೀ ಕೈಗಳು, ಮರದಿಂದ ಬಂದು ಸೇತುವೆಯನ್ನು ಅಂಗೈನಲ್ಲಿ ಹಿಡಿದಿರುವಂತೆ ಕಾಣಿಸುತ್ತಿದೆ. ಈ ಫೋಟೋ ಇತ್ತೀಚೆಗೆ ವೈರಲ್‌ ಆಗಿದ್ದರಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

ಸೇತುವೆ ಮೇಲಿನಿಂದ ನಿಂತರೆ ಸುಂದರ ಪರಿಸರದ ವಿಹಂಗಮ ನೋಟ ಕಾಣಿಸುವುದು ಪ್ರವಾಸಿಗರ ಆಯ್ಕೆಯ ಸ್ಥಳವಾಗಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ದಕ್ಷಿಣ ಏಷ್ಯಾದಲ್ಲಿ ನೋಡಲೇ ಬೇಕಾದ ಸ್ಥಳದಲ್ಲಿ ಗೋಲ್ಡನ್ ಬ್ರಿಡ್ಜ್‌ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ಬ್ರಿಡ್ಜ್‌ನ ಪ್ರಧಾನ ವಿನ್ಯಾಸಕಾರ ವು ವೈತ್‌ ಅನ್‌, ಬ ನಾ ಪರ್ವತದ ಬಳಿ ಇದೇ ರೀತಿಯ ಸಿಲ್ವರ್‌ ಬ್ರಿಡ್ಜ್‌ ಮಾಡಲು ಉದ್ದೇಶಿಸಲಾಗಿದೆ. ಗೋಲ್ಡನ್‌ ಬ್ರಿಡ್ಜ್‌ಗೆ ಈ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗುವುದನ್ನು ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...