alex Certify
ಕನ್ನಡ ದುನಿಯಾ       Mobile App
       

Kannada Duniya

ಕೊರೆಯುವ ಚಳಿಗೆ ಹೆಪ್ಪುಗಟ್ಟಿದೆ ಮಹಿಳೆಯ ರೆಪ್ಪೆ…!

ರಷ್ಯಾದ ಯಕುಟಿಯಾ ಪ್ರದೇಶದಲ್ಲಿರೋ ಈ ಪುಟ್ಟ ಗ್ರಾಮದಲ್ಲಿನ ಚಳಿಯ ತೀವ್ರತೆ ಕೇಳಿದ್ರೇನೇ ಮೈ ನಡುಗೋದು ಗ್ಯಾರಂಟಿ. ಒಮೈಕಾನ್ ಅಂತಾ ಈ ಊರಿನ ಹೆಸರು. ಇಲ್ಲಿ ಸುಮಾರು 500 ಜನರು ವಾಸವಾಗಿದ್ದಾರೆ. ಜಗತ್ತಿನಲ್ಲಿರೋ ಅತ್ಯಂತ ಶೀತ ಪ್ರದೇಶ ಇದು.

ಒಮೈಕಾನ್ ನಲ್ಲಿ ಈಗ -88 ಡಿಗ್ರಿ ಫ್ಯಾರನ್ ಹೀಟ್ ಉಷ್ಣಾಂಶವಿದೆ. ಚಳಿಗಾಲದಲ್ಲಿ ದಿನದ 21 ಗಂಟೆಗಳ ಕಾಲ ಈ ಗ್ರಾಮದಲ್ಲಿ ಕತ್ತಲು ಆವರಿಸಿರುತ್ತದೆ. ನದಿಗಳೆಲ್ಲ ಸಂಪೂರ್ಣ ಹೆಪ್ಪುಗಟ್ಟಿರುತ್ತವೆ. ಎಲ್ಲಿ ನೋಡಿದ್ರೂ ಹಿಮಗಳ ರಾಶಿ. ಅಲ್ಲಿನ ವಿಪರೀತ ಚಳಿಯಲ್ಲಿ ಬದುಕುವುದೇ ಕಷ್ಟ.

ಮನುಷ್ಯರ ಕಣ್ಣಿನ ರೆಪ್ಪೆಗಳು ಕೂಡ ಹೆಪ್ಪುಗಟ್ಟುತ್ತಿವೆ. ಮಹಿಳೆಯೊಬ್ಬಳ ರೆಪ್ಪೆ ಹೆಪ್ಪುಗಟ್ಟಿರೋ ಫೋಟೋ ಕೂಡ ವೈರಲ್ ಆಗಿದೆ. ಇಷ್ಟು ಚಳಿಯಲ್ಲಿ ಬದುಕೋದು ನಿಜಕ್ಕೂ ಅಪಾಯಕಾರಿ ಎನ್ನುತ್ತಾರೆ ತಜ್ಞರು. ಲಿವರ್ ಸೇರಿದಂತೆ ದೇಹದ ಒಳಗಿನ ಅಂಗಾಂಗಗಳು ಹೆಪ್ಪುಗಟ್ಟುವ ಸಾಧ್ಯತೆ ಇದ್ದು, ಕಾರ್ಯನಿರ್ವಹಿಸದೇ ಇರಬಹುದು ಅಂತಾ ಎಚ್ಚರಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...