alex Certify
ಕನ್ನಡ ದುನಿಯಾ       Mobile App
       

Kannada Duniya

ಈ ತಪ್ಪಿಗೆ ಥಾಯ್ಲೆಂಡ್ ಕೋರ್ಟ್ ನೀಡ್ತು 13,275 ವರ್ಷಗಳ ಜೈಲು ಶಿಕ್ಷೆ….

ಥೈಲ್ಯಾಂಡ್ ನ್ಯಾಯಾಲಯವೊಂದು ವಂಚನೆ ಪ್ರಕರಣದಲ್ಲಿ ಆರೋಪಿಗೆ 13,275 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 34 ವರ್ಷದ ಕಿತಿತ್ಡಾಲಿಕ್ ನಕಲಿ ಸ್ಕೀಂ ನಡೆಸುತ್ತಿದ್ದ. ಇದ್ರಲ್ಲಿ ಹಣ ತೊಡಗಿಸಿದವರಿಗೆ ಭಾರೀ ಮೊತ್ತದಲ್ಲಿ ಹಣ ನೀಡುವುದಾಗಿ ಹೇಳಿದ್ದ. ಸುಮಾರು 40 ಸಾವಿರ ಜನರು ಈತನ ನಕಲಿ ಸ್ಕೀಂನಲ್ಲಿ ಹಣ ಹೂಡಿದ್ದರು.

ನಕಲಿ ಸ್ಕೀಂ ಹೆಸರಿನಲ್ಲಿ 16 ಕೋಟಿ ಡಾಲರ್ ಹಣ ಸಂಗ್ರಹಿಸಿದ್ದ ಕಿತಿತ್ಡಾಲಿಕ್. ಅಕ್ರಮವಾಗಿ ಹಣ ಸಂಗ್ರಹ ಹಾಗೂ ವಂಚನೆ ಪ್ರಕರಣದಲ್ಲಿ ಕೋರ್ಟ್ ಈತನನ್ನು ದೋಷಿ ಎಂದು ತೀರ್ಪಿತ್ತಿದೆ. ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಹಾಗಾಗಿ ಆತನ ಶಿಕ್ಷೆ ಅರ್ಧಕ್ಕಿಳಿದಿದೆ. ಹಾಗೆ ಥೈಲ್ಯಾಂಡ್ ಕಾನೂನಿನ ಪ್ರಕಾರ ಆತ 20 ವರ್ಷಕ್ಕಿಂತ ಹೆಚ್ಚು ವರ್ಷ ಜೈಲಿನಲ್ಲಿರುವಂತಿಲ್ಲ. ಹಾಗಾಗಿ ಎರಡೂ ಪ್ರಕರಣದಲ್ಲಿ ಆರೋಪಿ 10-10ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.

ನ್ಯಾಯಾಲಯ ಆರೋಪಿಗೆ ಕಂಪನಿ ಪರ 17 ಕೋಟಿ ಡಾಲರ್ ನೀಡುವಂತೆ ಸೂಚನೆ ನೀಡಿದೆ. ಹಣ ತೊಡಗಿಸಿ ಮೋಸ ಹೋದವರಿಗೆ ಅವರ ಹಣವನ್ನು ಕೋರ್ಟ್ ವಾಪಸ್ ನೀಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...