alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಮಹಿಳೆ

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ದೃಶ್ಯ ಸಖತ್​ ವೈರಲ್​ ಆಗ್ತಾ ಇದೆ. ಮಹಿಳೆಯೊಬ್ಬಳು ಸಮುದ್ರ ಕಿನಾರೆಯಲ್ಲಿ ಶಾರ್ಕ್​​ಗೆ ಆಹಾರ ನೀಡಲು ಮುಂದಾಗಿದ್ದರು. ಇದೇ ವೇಳೆ ಒಂದು ಶಾರ್ಕ್​​ ಅಲ್ಲಿಗೆ ಬಂದು, ಆ ಮಹಿಳೆಯ ಮೇಲೆ ಆಕ್ರಮಣ ಮಾಡಿದೆ. ಅಲ್ಲದೆ ಮಹಿಳೆಯ ಕಾಲುಗಳನ್ನು ಎಳೆದು ಅವಳನ್ನು ನೀರಿನೊಳಕ್ಕೆ ಎಳೆದಿದೆ.

ಈ ವೇಳೆ ಮಹಿಳೆಯ ಜೊತೆ ಇದ್ದ ಕೆಲವರು ಅವಳನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.
ಪರ್ತ್​​​ನ ನಿವಾಸಿ ಮೆಲಿಸ್​​ ಬ್ರಿನಿಂಗ್​​, ರಜೆಯ ಮಜಾ ಸವಿಯಲು ಸಮುದ್ರ ಕಿನಾರೆಗೆ ಭೇಟಿ ನೀಡಿದ್ದರು. ಈ ವೇಳೆ ಮೆಲಿಸ್​​ ಶಾರ್ಕ್​​ಗೆ ಆಹಾರ ನೀಡಲು ಮುಂದಾಗಿದ್ದರು.

ಈ ದೃಶ್ಯವನ್ನು ಸೆರೆ ಹಿಡಿಯಲು ಅವರ ಸ್ನೇಹಿತರು ಕ್ಯಾಮೆರಾ ಹಿಡಿದು ಸಜ್ಜಾಗಿದ್ದರು. ಮೆಲಿಸ್​ ಇದ್ದಲ್ಲಿ ಮೂರರಿಂದ ನಾಲ್ಕು ಶಾರ್ಕ್​​ ಒಮ್ಮೆಲೆ ಆಕ್ರಮಣ ಮಾಡಿದವು. ಅದ್ರಲ್ಲಿ ಒಂದು ಶಾರ್ಕ್​​ ಮೆಲಿಸ್​ ಹತ್ತಿರಕ್ಕೆ ಬಂದು, ಅವಳನ್ನು ನೀರಿಗೆ ಎಳೆದುಬಿಟ್ಟಿತು.
ಶಾರ್ಕ್​​ ನನ್ನನ್ನು ಎಳೆದು ಕಾಲಿಗೆ ಬಾಯಿ ಹಾಕಿತು. ಶಾರ್ಕ್​​ ದಾಳಿಯಿಂದ ಪಾರಾಗಿದ್ದು, ಸಮಾಧಾನ ತಂದಿದೆ. ಆದ್ರೆ, ಬೆರಳು ಹೋದ ನೋವು ಕಾಡುತ್ತಾ ಇರುತ್ತದೆ ಎಂದು ಮೆಲಿಸ್​ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...