alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಯಾರಿಸ್ ರಸ್ತೆಯಲ್ಲಿ ದಿನವಿಡೀ ಓಡಲಿಲ್ಲ ಕಾರುಗಳು

ಪ್ಯಾರಿಸ್ ರಸ್ತೆಗಳ ತುಂಬೆಲ್ಲಾ ನಿನ್ನೆ ಸೈಕಲ್ ಗಳದ್ದೇ ಕಾರುಬಾರು. ಎಲ್ರೂ ಸೈಕಲ್ ನಲ್ಲೇ ಕಚೇರಿಗೆ ಹೊರಟಿದ್ರು. ಸೈಕಲ್ ಸವಾರಿ ಮೂಲಕ ಫಿಟ್ನೆಸ್ ಮೆಂಟೇನ್ ಮಾಡೋದ್ರ ಜೊತೆಗೆ ಪರಿಸರ ಕಾಳಜಿಯನ್ನೂ ಮೆರೆದಿದ್ದಾರೆ. ನಿನ್ನೆ ಇಡೀ ದಿನ ಪ್ಯಾರಿಸ್ ನಲ್ಲಿ ಕಾರುಗಳನ್ನೇ ನಿಷೇಧಿಸಲಾಗಿತ್ತು.

ದಿನೇ ದಿನೇ ನಗರದಲ್ಲಿ ಹೆಚ್ಚಾಗುತ್ತಿರುವ ವಾಯು ಮಾಲಿನ್ಯವನ್ನು ತಡೆಯುವುದು ಸರ್ಕಾರದ ಉದ್ದೇಶ. ಈ ಯೋಜನೆಗೆ ನಾಗರಿಕರು ಕೂಡ ಕೈಜೋಡಿಸಿರೋದು ವಿಶೇಷ. ಸಾಮಾಜಿಕ ಕಾರ್ಯಕರ್ತರು ಕೂಡ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೂ ಕಾರುಗಳನ್ನು ನಿರ್ಬಂಧಿಸಲಾಗಿತ್ತು. ಟ್ಯಾಕ್ಸಿ, ಬಸ್ ಹಾಗೂ ತುರ್ತು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದ್ರೆ ವಾಹನಗಳ ವೇಗವನ್ನು 30 ಕಿಮೀಗೆ ನಿಗದಿ ಮಾಡಲಾಗಿತ್ತು.

ನಗರದಾದ್ಯಂತ ನೂರಾರು ಪೊಲೀಸರು ಕಾರು ರಹಿತ ಚಾಲನೆ ಮೇಲೆ ನಿಗಾ ಇಟ್ಟಿದ್ದರು. ನಿಯಮ ಮೀರಿ ಕಾರು ಚಾಲನೆ ಮಾಡಿದವರಿಗೆ 90-135 ಯೂರೋ ದಂಡ ಕೂಡ ವಿಧಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...