alex Certify
ಕನ್ನಡ ದುನಿಯಾ       Mobile App
       

Kannada Duniya

ಈಜಿಪ್ಟ್ ನಲ್ಲಿ ಇಬ್ಬರು ‘ಅಪರೂಪ’ದ ವ್ಯಕ್ತಿಗಳ ಸಮ್ಮಿಲನ

ವಿಶ್ವದ ಅತಿ ಎತ್ತರದ ವ್ಯಕ್ತಿ ಹಾಗೂ ಅತ್ಯಂತ ಕುಳ್ಳ ಮಹಿಳೆ ಈಜಿಪ್ಟ್ ನಲ್ಲಿ ಭೇಟಿಯಾಗಿದ್ದಾರೆ. ಟರ್ಕಿಯ ಸುಲ್ತಾನ್ ಕೋಸೆನ್ ವಿಶ್ವದ ಅತಿ ಎತ್ತರದ ವ್ಯಕ್ತಿ. ಇವರ ಎತ್ತರ ಬರೋಬ್ಬರಿ 8 ಅಡಿ 9 ಇಂಚು. ನಾಗ್ಪುರದ ಮಹಿಳೆ ಜ್ಯೋತಿ ಅಮ್ಗೆ ವಿಶ್ವದ ಅತಿ ಕುಳ್ಳ ವ್ಯಕ್ತಿ ಎಂಬ ಗಿನ್ನಿಸ್ ದಾಖಲೆ ಹೊಂದಿದ್ದಾಳೆ.

ಇವಳ ಎತ್ತರ ಕೇವಲ 2 ಅಡಿ 6 ಇಂಚು. ಸುಲ್ತಾನ್ ಗೆ ಈಗ 36 ವರ್ಷ. 25ರ ಹರೆಯದ ಜ್ಯೋತಿ ಸುಲ್ತಾನ್ ರನ್ನು ಈಜಿಪ್ಟ್ ನ ಗಿಝಾ ನಗರದಲ್ಲಿ ಭೇಟಿಯಾಗಿದ್ದಾಳೆ. ನೈಲ್ ನದಿಯ ತಟದಲ್ಲಿ ಇಬ್ಬರೂ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈಜಿಪ್ಟ್ ನ ಪ್ರವಾಸೋದ್ಯಮ ಇಲಾಖೆ ಇವರನ್ನು ಕರೆಸಿತ್ತು.

2009ರಿಂದ್ಲೂ ಸುಲ್ತಾನ್ ವಿಶ್ವದ ಅತಿ ಎತ್ತರದ ವ್ಯಕ್ತಿ ಎನಿಸಿಕೊಂಡಿದ್ದಾರೆ. ಈವರೆಗೆ 8 ಅಡಿಗಿಂತ ಹೆಚ್ಚು ಎತ್ತರವಿರುವ 10 ವ್ಯಕ್ತಿಗಳು ಮಾತ್ರ ಜಗತ್ತಿನಲ್ಲಿ ಪತ್ತೆಯಾಗಿದ್ದಾರೆ. ಇನ್ನು ಭಾರತದ ಜ್ಯೋತಿಯ ಎತ್ತರ ಕೇವಲ 2 ವರ್ಷದ ಮಗುವಿನಷ್ಟಿದೆ. ಹಲವು ಟಿವಿ ಶೋಗಳಲ್ಲಿ ಕೂಡ ಜ್ಯೋತಿ ಕಾಣಿಸಿಕೊಂಡಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...