alex Certify
ಕನ್ನಡ ದುನಿಯಾ       Mobile App
       

Kannada Duniya

ನಿರಾಶ್ರಿತ ಬಾಲಕನ ಬದುಕನ್ನೇ ಬದಲಾಯಿಸಿತ್ತು ಆ ಫೋಟೋ

ಎಷ್ಟೋ ಜನರ ಬದುಕನ್ನು ಕ್ಷಣಮಾತ್ರದಲ್ಲೇ ಬದಲಾಯಿಸಬಲ್ಲ ಶಕ್ತಿ ಸಾಮಾಜಿಕ ತಾಣಗಳಿಗಿದೆ. ಸಿರಿಯಾ ಮೂಲದ ನಿರಾಶ್ರಿತ ಬಾಲಕನೇ ಇದಕ್ಕೆ ಎಕ್ಸಾಂಪಲ್. ಟರ್ಕಿಯ ಜಿಮ್ ಒಂದು ಇವನಿಗೆ ಉಚಿತವಾಗಿ ಅಜೀವ ಜಿಮ್ ಸದಸ್ಯತ್ವ ನೀಡಿದೆ.

ಇದಕ್ಕೆ ಕಾರಣ ವೈರಲ್ ಆಗಿದ್ದ 12 ವರ್ಷದ ಬಾಲಕನ ಫೋಟೋ. ಮುಹ್ಹೆಮೆತ್ ಹತಿಲ್ ಎಂಬ ಈ ಬಾಲಕ ಶೂ ಪಾಲಿಶ್ ಮಾಡ್ತಿದ್ದ. ಈ ಜಿಮ್ ಬಳಿ ನಿಂತು ಆಸೆಗಣ್ಣಿನಿಂದ ಒಳಗೆ ಕಸರತ್ತು ಮಾಡುವವರನ್ನು ನೋಡುತ್ತಿದ್ದ. ಮಾಹಿರ್ ಅಲನ್ ಎಂಬ ಪತ್ರಕರ್ತ ಬಾಲಕನ ಫೋಟೋವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದ.

ಆ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ನೋಡಿದ ಜಿಮ್ ಆತನಿಗೆ ಉಚಿತ ಸದಸ್ಯತ್ವ ನೀಡಿದೆ. ಈ ಬಾಲಕ 4 ವರ್ಷಗಳ ಹಿಂದೆ ಸಿರಿಯಾದಲ್ಲಿ ನಡೆದ ಭೀಕರ ಯುದ್ಧದಿಂದ ತಪ್ಪಿಸಿಕೊಂಡು ಬಂದಿದ್ದ. ಆತನ ತಂದೆ ಚಿಂದಿ ಆಯುವ ಕೆಲಸ ಮಾಡ್ತಾನೆ. ಮೊದಲಿನಿಂದ್ಲೂ ಬಾಲಕನಿಗೆ ತೂಕ ಇಳಿಸಿಕೊಳ್ಳಬೇಕು ಎಂಬ ಆಸೆಯಿತ್ತು, ಈಗ ಅದು ನೆರವೇರಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...