alex Certify
ಕನ್ನಡ ದುನಿಯಾ       Mobile App
       

Kannada Duniya

ಇಟಲಿಯಲ್ಲಿ ತಯಾರಾಗಿದೆ ಜಗತ್ತಿನ ಅತಿ ದೊಡ್ಡ ಕೇಕ್…!

ಇಟಲಿಯಲ್ಲಿ ಪ್ರತಿವರ್ಷವೂ ಕ್ರಿಸ್ಮಸ್ ಸಡಗರ ಜೋರಾಗಿರುತ್ತದೆ. ಕ್ರಿಸ್ಮಸ್ ಅಂದ್ಮೇಲೆ ಅಲ್ಲಿ ಕೇಕ್ ಇರಲೇಬೇಕು. ಮಿಲಾನ್ ನಲ್ಲಿ ಈಗಾಗ್ಲೇ ಹಬ್ಬದ ಸಡಗರ ಶುರುವಾಗಿದ್ದು, ವಿಶ್ವದ ಅತಿ ದೊಡ್ಡ ಕ್ರಿಸ್ಮಸ್ ಕೇಕ್ ಕೂಡ ತಯಾರಾಗಿದೆ.

ಈ ಕೇಕ್ ನ ತೂಕ 140 ಕೆಜಿ. ಸುಮಾರು 2 ಮೀಟರ್ ಎತ್ತರವಿರೋ ಕೇಕ್ ಅನ್ನು 1200 ಜನರಿಗೆ ಹಂಚಬಹುದು. ವಿಕ್ಟರ್ ಇಮ್ಮಾನ್ಯುಯೆಲ್-2 ಶಾಪಿಂಗ್ ಗ್ಯಾಲರಿಯಲ್ಲಿ ಕೇಕ್ ಅನ್ನು ಪ್ರದರ್ಶನಕ್ಕೆ ಇಡಲಾಗಿದೆ. ಪ್ರವಾಸಿಗರು ಹಾಗೂ ಸ್ಥಳೀಯರು ಕೇಕ್ ಅನ್ನು ಕಣ್ತುಂಬಿಕೊಳ್ತಿದ್ದಾರೆ.

ಪ್ಯಾನೆಟೋನ್ ಅಂತಾ ಇದರ ಹೆಸರು, ಇದೊಂದು ಕ್ರಿಸ್ಮಸ್ ಡೆಸರ್ಟ್. ಜಗತ್ತು ಎಷ್ಟೇ ಬದಲಾದ್ರೂ ಈ ಸಾಂಪ್ರದಾಯಿಕ ತಿನಿಸು ಮಾತ್ರ ಬದಲಾಗಿಲ್ಲ. ದಿ ಮಿಲಾನೀಸ್ ಫ್ಯಾಕ್ಟರಿ ಈ ಕೇಕ್ ಅನ್ನು ತಯಾರಿಸಿದೆ.

ಸುಮಾರು 50 ವರ್ಷಗಳ ಅನುಭವವಿರೋ ಬಾಣಸಿಗರು ಇದನ್ನು ಸಿದ್ಧಪಡಿಸಿದ್ದಾರೆ. ಈ ಕೇಕ್ ಸಂಪೂರ್ಣ ಸಿದ್ಧವಾಗಲು 36 ಗಂಟೆಗಳು ಬೇಕಾಯ್ತು. ಸ್ಪೆಷಲ್ ಓವನ್ ನಲ್ಲಿ ಇದನ್ನು ಬೇಕ್ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...