alex Certify
ಕನ್ನಡ ದುನಿಯಾ       Mobile App
       

Kannada Duniya

10 ಶರ್ಟ್, 8 ಪ್ಯಾಂಟ್ ಧರಿಸಿ ವಿಮಾನವೇರಲು ಬಂದಿದ್ದ ಭೂಪ…!

ವಿಮಾನದಲ್ಲಿ ಪ್ರಯಾಣಿಕರು ಇಂತಿಷ್ಟೇ ತೂಕದ ಲಗೇಜ್ ತರಬೇಕು ಅನ್ನೋ ನಿಯಮವಿದೆ. ಅದಕ್ಕಿಂತ ಹೆಚ್ಚಿನ ಲಗೇಜ್ ತಂದ್ರೆ ಅದಕ್ಕೆ ಹೆಚ್ಚುವರಿ ಶುಲ್ಕ ನೀಡಬೇಕಾಗುತ್ತದೆ. ರಯಾನ್ ಕಾರ್ನಿ ವಿಲಿಯಮ್ಸ್ ಎಂಬ ಯುವಕ ಹೆಚ್ಚುವರಿ ಲಗೇಜ್ ಗೆ ವಿಧಿಸುವ ಹೆಚ್ಚುವರಿ ಶುಲ್ಕ ತಪ್ಪಿಸಿಕೊಳ್ಳಲು ಸಖತ್ ಐಡಿಯಾ ಮಾಡಿದ್ದ.

ಆದ್ರೆ ಆ ಪ್ಲಾನ್ ಠುಸ್ಸಾಗಿದೆ. ಐಸ್ ಲ್ಯಾಂಡ್ ನಿಂದ ಇಂಗ್ಲೆಂಡ್ ಗೆ ಹೊರಟಿದ್ದ ರಯಾನ್ ಗೆ ತನ್ನ ಲಗೇಜ್ ಜಾಸ್ತಿ ಇದೆ ಅನ್ನೋದು ಗೊತ್ತಾಗಿತ್ತು. ಹಾಗಾಗಿ ಹೆಚ್ಚುವರಿ ಶುಲ್ಕದಿಂದ ಪಾರಾಗಲು ತಾನೇ 10 ಶರ್ಟ್ ಹಾಗೂ 8 ಪ್ಯಾಂಟ್ ಧರಿಸಿ ಲಗೇಜ್ ತೂಕ ಕಡಿಮೆ ಮಾಡಿದ್ದ.

ಆದ್ರೆ ಇದು ವಿಮಾನ ನಿಲ್ದಾಣದ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಆತನಿಗೆ ಬೋರ್ಡಿಂಗ್ ಪಾಸ್ ಕೊಡಲು ಬ್ರಿಟಿಷ್ ಏರ್ವೇಸ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಆದ್ರೂ ಆತ ಹಠ ಹಿಡಿದಾಗ ಬೇರೆ ವಿಧಿಯಿಲ್ಲದೇ ಅವನನ್ನು ಬಂಧಿಸಿದ್ದಾರಂತೆ. ಆದ್ರೆ ಅಧಿಕಾರಿಗಳು ತನ್ನ ಮೇಲೆ ದೌರ್ಜನ್ಯ ಮಾಡಿದ್ದಾರೆ ಅಂತಾ ರಯಾನ್ ವಿಡಿಯೋವನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ.

ಬೇರೆ ದಾರಿಯಿಲ್ಲದೇ ರಯಾನ್ ಮನೆಗೆ ವಾಪಸ್ಸಾದ. ಮರುದಿನ ಮತ್ತೆ ಫ್ಲೈಟ್ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ಬಂದಿದ್ದಾನೆ. ಹಿಂದಿನ ದಿನ ನಡೆದ ಘಟನೆ ಹಿನ್ನೆಲೆಯಲ್ಲಿ ಅಂದು ಕೂಡ ರಯಾನ್ ಗೆ ಬೋರ್ಡಿಂಗ್ ಪಾಸ್ ಕೊಟ್ಟಿಲ್ಲ ಅಧಿಕಾರಿಗಳು. ಕೈಯಲ್ಲಿದ್ದ ಹಣವೆಲ್ಲಾ ಟಿಕೆಟ್ ಗೆ ಖರ್ಚಾಗಿತ್ತು. ರಯಾನ್ ಲಗೇಜ್ ಅದಾಗ್ಲೇ ಇಂಗ್ಲೆಂಡ್ ತಲುಪಿತ್ತು. ಇದನ್ನೆಲ್ಲಾ ರಯಾನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...