alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್‌‌ ಬುಕ್‌ ಸಿಇಒ ಗೆ ಐಸಿಸ್ ಉಗ್ರರ ಬೆದರಿಕೆ

25-dorsey-zuckerberg-isis.w529.h352

ಪೈಶಾಚಿಕ ಕೃತ್ಯಗಳ ಮೂಲಕ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಐಸಿಸ್ ಉಗ್ರರು ಇದೀಗ ಪ್ರಸಿದ್ದ ಸಾಮಾಜಿಕ ಜಾಲತಾಣಗಳಾದ ಫೇಸ್‌ ‌ಬುಕ್‌ ಹಾಗೂ ಟ್ವಿಟರ್‌‌ ಸಿಇಒ ಗಳಿಗೆ ಬೆದರಿಕೆ ಹಾಕಿದ್ದಾರೆ.

ಹೌದು. ಉಗ್ರ ಕೃತ್ಯಗಳನ್ನು ತಡೆಗಟ್ಟುವ ಹಾಗೂ ಜನರು ಇಂತಹ ಸಂಘಟನೆಗಳತ್ತ ಆಕರ್ಷಿಸುವುದನ್ನು ತಪ್ಪಿಸಲು ಸಾಮಾಜಿಕ ಜಾಲತಾಣಗಳಾದ ಫೇಸ್‌‌ ಬುಕ್‌ ಹಾಗೂ ಟ್ವಿಟರ್‌‌ ಸಂಸ್ಥೆಗಳು ಉಗ್ರರಿಗೆ ಸಂಬಂಧಿಸಿದ ಖಾತೆಗಳನ್ನು ಸ್ಥಗಿತಗೊಳಿಸುವ ಮೂಲಕ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದವು.

ಈ ಹಿನ್ನೆಲೆಯಲ್ಲಿ ಫೇಸ್‌ ಬುಕ್‌ ಸಿಇಒ ಮಾರ್ಕ್‌ ಜುಕರ್‌ ಬರ್ಗ್‌ ಹಾಗೂ ಟ್ವಿಟರ್‌‌ ಸಿಇಒ ಜಾಕ್‌ ಡೋರ್ಸಿ ಅವರ ವಿರುದ್ದ ಸೇಡು ತೀರಿಸಿಕೊಳ್ಳುವುದಾಗಿ ಬೆದರಿಸಿರುವ ಐಸಿಸ್ ಉಗ್ರ ಸಂಘಟನೆ ಈ ಕುರಿತಂತೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.ಈ ವಿಡಿಯೋದಲ್ಲಿ ಫೇಸ್‌ ಬುಕ್‌ ಸಿಇಒ ಮಾರ್ಕ್‌ ಜುಕರ್‌ ಬರ್ಗ್‌ ಹಾಗೂ ಟ್ವಿಟರ್‌‌ ಸಿಇಒ ಜಾಕ್‌ ಡೋರ್ಸಿ ಅವರ ಮೇಲೆ ಗುಂಡಿನ ದಾಳಿ ನಡೆಸುವಂತಹ ದೃಶ್ಯಾವಳಿಗಳಿದ್ದು, ವಿಡಿಯೋದ ಕೊನೆ ಭಾಗದಲ್ಲಿ ನೀವು ನಮ್ಮ ಅಕೌಂಟ್‌ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡರೆ ನೀವೂ ಇರುವುದಿಲ್ಲ ಎಂದು ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...