alex Certify
ಕನ್ನಡ ದುನಿಯಾ       Mobile App
       

Kannada Duniya

ನೇಪಾಳಿ ಕರೆನ್ಸಿ ಮೇಲೆ ಬರೆದ್ರೆ ಜೈಲೂಟ ಗ್ಯಾರಂಟಿ

ನೇಪಾಳದಲ್ಲಿ ಕರೆನ್ಸಿಯನ್ನು ಮಡಚುವುದು, ಸುಡುವುದು, ಅದ್ರ ಮೇಲೆ ಬರೆಯುವುದು ದೊಡ್ಡ ಅಪರಾಧ. ಈ ಸಂಬಂಧ ಹೊಸ ಕಾನೂನೊಂದು ಆಗಸ್ಟ್ 17 ರಿಂದ ಜಾರಿಗೆ ಬರಲಿದೆ. ಅಪರಾಧಿ ಕಾನೂನು 2017 ರ ಪ್ರಕಾರ ಕರೆನ್ಸಿ ಹಾಗೂ ನಾಣ್ಯಕ್ಕೆ ಹಾನಿಯುಂಟು ಮಾಡಿದ್ರೆ 5000 ನೇಪಾಳಿ ರೂಪಾಯಿಯವರೆಗೆ ದಂಡ ನೀಡಬೇಕಾಗುತ್ತದೆ. ಜೊತೆಗೆ ಮೂರು ತಿಂಗಳುಗಳ ಕಾಲ ಕಂಬಿ ಎಣಿಸಬೇಕಾಗುತ್ತದೆ.

ವರದಿ ಪ್ರಕಾರ, ನೇಪಾಳ ಸೆಂಟ್ರಲ್ ಬ್ಯಾಂಕ್ ಹಾಗೂ ನೇಪಾಳ ರಾಷ್ಟ್ರ ಬ್ಯಾಂಕ್, ಬುಧವಾರ ಇತರ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗೆ ಮಾಹಿತಿ ರವಾನೆ ಮಾಡಿದೆ. ಇನ್ನೊಂದು ನೋಟೀಸ್ ನಲ್ಲಿ ನೇಪಾಳಿ ಜನರಿಗೂ ಬ್ಯಾಂಕ್ ಈ ಬಗ್ಗೆ ಮಾಹಿತಿ ನೀಡಿದೆ.

ನಾಣ್ಯ ಹಾಗೂ ನೋಟುಗಳನ್ನು ಬಹುಕಾಲ ಸಂರಕ್ಷಿಸಿಡುವ ಉದ್ದೇಶದಿಂದ ಈ ಕೆಲಸಕ್ಕೆ ಕೈ ಹಾಕಲಾಗಿದೆ. ಈ ಹಿಂದೆ ನಕಲಿ ನೋಟುಗಳ ವಿರುದ್ಧ ಮಾತ್ರ ಕಾನೂನಿತ್ತು. ಆದ್ರೆ ಅಸಲಿ ನೋಟಿನ ಮೇಲೆಯೂ ನೇಪಾಳದಲ್ಲಿ ಕಾನೂನು ಜಾರಿಗೆ ಬರಲಿದೆ. ಈ ಕಾನೂನಿನಡಿ ಕರೆನ್ಸಿ ಹಾಗೂ ನಾಣ್ಯವನ್ನು ಹಾಳು ಮಾಡುವ ಕೆಲಸ ಮಾಡುವಂತಿಲ್ಲ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...