alex Certify
ಕನ್ನಡ ದುನಿಯಾ       Mobile App
       

Kannada Duniya

ನಡುರಸ್ತೆಯಲ್ಲಿ ಸಿಂಹ ಕಂಡು ದಂಗಾದ್ರು ವಾಹನ ಸವಾರರು

ಕುವೈತ್ ನ ವಾಹನ ಚಾಲಕರಿಗೆ ಗಾಬರಿ….ಆತಂಕ….ರಸ್ತೆಯ ಮಧ್ಯ ಬಂದ ಅತಿಥಿ ಎಲ್ಲರಿಗೂ ಭಯ ಹುಟ್ಟಿಸಿತ್ತು. ದಾರಿಯಲ್ಲಿ ಕಾರ್ ಗಳು ಚಲಿಸುತ್ತಾ ಇದ್ದರೆ, ರಸ್ತೆಯ ಪಕ್ಕದಲ್ಲಿ ಸಿಂಹ ಕಾಣಿಸಿಕೊಂಡಿದ್ದು, ಚಾಲಕರಲ್ಲಿ ಭಯ ಹುಟ್ಟಿಸಿದೆ.

ಕುವೈತ್ ನ ಕಬಾಡ್ ಜಿಲ್ಲೆಯಲ್ಲಿ ಈ ದೃಶ್ಯ ಕೆಲಕಾಲ ಸವಾರರನ್ನು ಕಂಗೆಡಿಸಿದ್ದು ಸುಳ್ಳಲ್ಲ. ರಸ್ತೆಯ ಮಧ್ಯದಲ್ಲಿ ಸಿಂಹ ಓಡಾಡುತ್ತಿರುವ ಬಗ್ಗೆ ವಾಹನ ಸವಾರರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಜಾನುವಾರು ಪ್ರಾಧಿಕಾರದ ಅಧಿಕಾರಿಗಳು, ಪೊಲೀಸರು ಸರಿಯಾದ ಸಮಯಕ್ಕೆ ಸ್ಥಳಕ್ಕೆ ಆಗಮಿಸಿ ಆಗಬಹುದಾದ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಅಲ್ಲದೆ ಸಿಂಹವನ್ನು ಪ್ರಾಣಿ ಸಂಗ್ರಹಾಲಯಕ್ಕೆ ನೀಡಿದ್ದಾರೆ.

ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡ್ತಾ ಇದೆ. ಈ ಸಿಂಹ ಸಾಕು ಪ್ರಾಣಿಯೆಂದು ತಿಳಿದು ಬಂದಿದ್ದು, ಮಾಲೀಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕುವೈತ್ ನಲ್ಲಿ ಕಾಡು ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಅನುಮತಿ ಇದೆ. ಆದ್ರೆ, ಮಾಲೀಕನ ಬೇಜವಾಬ್ದಾರಿತನದಿಂದ ಸಿಂಹ ರಸ್ತೆಗೆ ಇಳಿದಿದೆ. ಹೀಗಾಗಿ ಮಾಲೀಕನಿಗೆ ಕನಿಷ್ಠ ಮೂರು ವರ್ಷ ಜೈಲಾಗುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...