alex Certify
ಕನ್ನಡ ದುನಿಯಾ       Mobile App
       

Kannada Duniya

ಹಂದಿಯನ್ನು ಬೆನ್ನಟ್ಟಿದ ವಿಡಿಯೋ ಪೋಸ್ಟ್ ಮಾಡಿದ ಪೊಲೀಸ್

ಇದು ಪೊಲೀಸಪ್ಪನ ಸಂಶಯಾಸ್ಪದ ಚೇಸಿಂಗ್ ಅಲ್ಲ. ಉಲ್ಲಾಸ-ಉತ್ಸಾಹದಿಂದ ಅಟ್ಟಿಕೊಂಡು ಹೋದ ಪ್ರಕರಣ!

ಫ್ಲೋರಿಡಾ ಪೊಲೀಸ್ ಅಧಿಕಾರಿ ಹಂದಿ ಮರಿಯನ್ನು ಬೆನ್ನಟ್ಟಿದ ವಿಡಿಯೋ ಒಂದು ಸಾಮಾಜಿಕ ಜಾಲ ತಾಣದಲ್ಲಿ ಹಾಸ್ಯದ ವಿಷಯವಾಗಿದೆ. ಪ್ರಾಣಿ ನಾಪತ್ತೆ ಸಂಬಂಧ ದೂರಿಗೆ ಪ್ರತಿಕ್ರಿಯಿಸಿರುವ ಪೊಲೀಸ್ ತಾವು ಹಂದಿಮರಿ ಅಟ್ಟಿಸಿಕೊಂಡು ಹೋದ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ಕೇಪ್ ಕೋರ್ ಪೊಲೀಸ್ ಇಲಾಖೆಯ ರೇ ಶಿಲ್ಕೆ ಎಂಬ ಅಧಿಕಾರಿಯು ತಪ್ಪಿಸಿಕೊಂಡಿದ್ದ ಸಣ್ಣ ಹಂದಿ ಮರಿಯನ್ನು ಪತ್ತೆ ಹಚ್ಚಿ ಅದನ್ನು ಬೆನ್ನಟ್ಟಲು ಪ್ರಾರಂಭಿಸಿದರು. ಆ ಗಳಿಗೆಯನ್ನು ಅವರು ವಿಡಿಯೋ ಮಾಡಿಕೊಂಡಿದ್ದರು.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋವನ್ನು 26 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಹಲವು ಡಜನ್ ಕಾಮೆಂಟ್ ಬಂದಿದೆ. ಕೆಲವರು ಹಾಸ್ಯಮಯವಾಗಿ ಅಭಿಪ್ರಾಯ ನೀಡಿದ್ದರೆ, ಮತ್ತೆ ಕೆಲವರು ವ್ಯಂಗ್ಯಭರಿತ ಟೀಕೆ ಮಾಡಿದ್ದಾರೆ. ಜತೆಗೆ ಹಂದಿ ಅಟ್ಟಿಸಿಕೊಂಡು ಹೋಗುವಾಗ ಆ ಅಧಿಕಾರಿ ಸಹ ಹಾಸ್ಯ ಮಾಡಿಕೊಂಡಿದ್ದಾರೆ. ಹಂದಿ ಸಣ್ಣ ಹಂದಿ ಮರಿಯನ್ನು ಚೇಸ್ ಮಾಡುತ್ತಿದೆ, ಎಷ್ಟು ಫನ್ನಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇಲಾಖೆ ಮಾಹಿತಿ ಪ್ರಕಾರ, ಹಂದಿಮರಿಯನ್ನು ಅದರ ಮಾಲೀಕನಿಗೆ ಒಪ್ಪಿಸಲಾಯಿತು. ಆ ಹಂದಿ ಮರಿ ಹೆಸರು ವಿಲ್ಲಿ ಎಂದು ಗುರುತಿಸಲಾಗಿದ್ದು, ವಿಲ್ಲಿ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ ಎಂದು ಫೇಸ್ ಬುಕ್ ನಲ್ಲಿ ಇಲಾಖೆ ಹಾಸ್ಯ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...