alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರನ ಪ್ರಾಣ ಉಳಿಸಲು ಗರ್ಭಪಾತ ಮಾಡಿಸಿಕೊಂಡ್ಲು ಸಹೋದರಿ

sisters-bone-marro-china_24_10_2016

ಕೆಲವೊಮ್ಮೆ ಜೀವನದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಚೀನಾದ ಹಾಂಗ್ ಝೌ ನಗರದಲ್ಲಿ ವಾಸಿಸುವ 24 ವರ್ಷದ ಯಾಂಗ್ ಲಿಗೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಮನೆಗೆ ಹೊಸ ಅತಿಥಿ ಬರುವ ನಿರೀಕ್ಷೆಯಲ್ಲಿದ್ದ ಯಾಂಗ್ ಲಿ ಗೆ ಸಹೋದರನ ಖಾಯಿಲೆ ಸವಾಲಾಗಿತ್ತು.

ಯಾಂಗ್ ಲಿ ಸಹೋದರ ಲಿಂಫೊಮಾ ಖಾಯಲೆಯಿಂದ ಬಳಲುತ್ತಿದ್ದ. ಬೋನ್ ಮ್ಯಾರೋ ಕಸಿ ಮಾಡಬೇಕಾಗಿತ್ತು. ಗರ್ಭಿಣಿಯಾಗಿದ್ದ ಯಾಂಗ್ ಲಿಗೆ ಮಗು ಅಥವಾ ಅಣ್ಣ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. 29 ವರ್ಷದ ಯಾಂಗ್ ಜೂನ್ ಗೆ  ಯಾಂಗ್ ಲೀ, ಮಜ್ಜೆ ಸರಿಯಾಗಿ ಹೊಂದಾಣಿಕೆಯಾಗ್ತಾ ಇತ್ತು. ಆದ್ರೆ ಗರ್ಭ ಧರಿಸಿದ್ದ ಯಾಂಗ್ ಲಿ ಗರ್ಭಿಣಿಯಾಗಿದ್ದಾಗ ಮಜ್ಜೆ ನೀಡುವಂತಿರಲಿಲ್ಲ. ಹಾಗಾಗಿ ಯಾಂಗ್ ಲಿ ಗರ್ಭಪಾತ ಮಾಡಿಸಿಕೊಂಡಿದ್ದಾಳೆ. ಸದ್ಯ ವಿಶ್ರಾಂತಿಯಲ್ಲಿದ್ದು, ಆದಷ್ಟು ಬೇಗ ವೈದ್ಯರು ಸಹೋದರನ ಶಸ್ತ್ರಚಿಕಿತ್ಸೆ ಮಾಡಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಕೆಲವರು ಲಿಯನ್ನು ಹೊಗಳುತ್ತಿದ್ದಾರೆ. ಮತ್ತೆ ಕೆಲವರು ಇಂತ ಮಹತ್ವದ ನಿರ್ಧಾರ ತೆಗೆದುಕೊಳ್ಳುವುದು ಸುಲಭವಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...