alex Certify
ಕನ್ನಡ ದುನಿಯಾ       Mobile App
       

Kannada Duniya

ಅವನ ಸೂಟ್ ಕೇಸ್ ನಲ್ಲಿತ್ತು ಹಾವುಗಳ ರಾಶಿ….

ಚೀನಾದಲ್ಲಿ ವ್ಯಕ್ತಿಯೊಬ್ಬ 50 ವಿಷಕಾರಿ ಹಾವುಗಳನ್ನು ಸೂಟ್ ಕೇಸ್ ನಲ್ಲಿಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ. ಹಾವುಗಳಿಂದ ವೈನ್ ಮಾಡಲು ಮುಂದಾಗಿದ್ದ ವ್ಯಕ್ತಿಯನ್ನು ರೈಲು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಜೆಝಿಯಾಂಗ್ ನಿಂದ ತಂದಿದ್ದ ಹಾವುಗಳನ್ನು ಗುವಾಂಗ್ಝೌಗೆ ಕೊಂಡೊಯ್ಯುತ್ತಿದ್ದ. 50 ವರ್ಷದ ಈತ ಹಾವು ಕೊಳ್ಳಲೆಂದೇ ಬಂದಿದ್ದ. ಕವರ್ ಒಂದರಲ್ಲಿ ಹಾವುಗಳನ್ನು ತುಂಬಿಸಿಟ್ಟಿದ್ದ. ಹಾವಿನ ಮರಿಗಳು ಸುಮಾರು 4 ಕೆಜಿ ತೂಕವಿದ್ವು. ಬ್ಯಾಗೇಜ್ ಚೆಕ್ಕಿಂಗ್ ವೇಳೆ ಸ್ಕ್ಯಾನರ್ ನಲ್ಲಿ ಹಾವುಗಳು ಪತ್ತೆಯಾಗಿವೆ. ಟವೆಲ್ ಒಂದರಲ್ಲಿ ಸುತ್ತಿ ಹಾವುಗಳನ್ನು ಕವರ್ ನಲ್ಲಿ ಹಾಕಿದ್ದ.

ದೊಡ್ಡ ಜಾರ್ ನಲ್ಲಿ ರೈಸ್ ವೈನ್ ಮತ್ತು ಸ್ಟ್ರಾಂಗ್ ಆಗಿರೋ ಅಲ್ಕೋಹಾಲ್ ಹಾಕಿ ಅದರಲ್ಲಿ ಹಾವುಗಳನ್ನು ನೆನೆಸಿ ಇಡಲಾಗುತ್ತದೆ. ಕೆಲವೊಂದು ಗಿಡಮೂಲಿಕೆಗಳನ್ನು ಕೂಡ ಹಾಕಲಾಗುತ್ತದೆ. ಹಲವು ತಿಂಗಳುಗಳ ನಂತರ ಹಾವು ಮದ್ಯದಲ್ಲಿ ಎಲ್ಲಾ ಎಸೆನ್ಸ್ ಬಿಟ್ಟ ಮೇಲೆ ಅದನ್ನು ಕುಡಿಯುತ್ತಾರೆ.

ಈ ಸ್ನೇಕ್ ವೈನ್ ಬಹಳ ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಕೂದಲು ಉದುರುವಿಕೆ ಮತ್ತು ಕುಷ್ಠರೋಗಕ್ಕೆ ಪರಿಹಾರ ನೀಡಬಲ್ಲದು. ಜೊತೆಗೆ ಸ್ನೇಕ್ ವೈನ್ ಕಾಮೋತ್ತೇಜಕವೂ ಎನ್ನಲಾಗಿದ್ದು, ಹಾಗಾಗಿ ಚೀನಾದಲ್ಲಿ ಇದಕ್ಕೆ ಬಹುಬೇಡಿಕೆ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...