alex Certify
ಕನ್ನಡ ದುನಿಯಾ       Mobile App
       

Kannada Duniya

FB ನಲ್ಲಿ ‘ಲೈಕ್’ ಮಾಡಿದ್ದಕ್ಕೆ ಬಿತ್ತು ಭಾರೀ ದಂಡ

fb-fb-fb

ಲಂಡನ್: ಸಾಮಾಜಿಕ ಜಾಲತಾಣ ಫೇಸ್ ಬುಕ್ ಬಳಕೆದಾರರ ಸಂಖ್ಯೆ ಇತ್ತೀಚೆಗೆ ಜಾಸ್ತಿಯಾಗಿದೆ. ಜಾಲತಾಣ ಬಳಸುವಾಗ ಎಚ್ಚರ ತಪ್ಪಿದರೆ ಹೇಗೆಲ್ಲಾ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ಇಲ್ಲೊಂದು ಪ್ರಕರಣ ನಿದರ್ಶನವಾಗಿದೆ.

ಫೇಸ್ ಬುಕ್ ನಲ್ಲಿ ಕಂಡಿದ್ದಕ್ಕೆಲ್ಲಾ ‘ಲೈಕ್’ ಒತ್ತುವ ಖಯಾಲಿ ಅನೇಕರಿಗೆ ಇರುತ್ತದೆ. ಹೀಗೆ ‘ಲೈಕ್’ ಒತ್ತಿದ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಸ್ವಿಸ್ ಕೋರ್ಟ್ 4000 ಡಾಲರ್(ಸುಮಾರು 2.50 ಲಕ್ಷ ರೂ.) ದಂಡ ವಿಧಿಸಿದೆ.

ಸ್ವಿಸ್ ಕೋರ್ಟ್ ನಲ್ಲಿ ಇದೇ ಪ್ರಥಮ ಬಾರಿಗೆ ಇಂತಹ ತೀರ್ಪು ನೀಡಲಾಗಿದೆ. ಪ್ರಾಣಿಗಳ ಹಕ್ಕುಗಳ ಪರವಾಗಿ ಹೋರಾಟ ನಡೆಸುವ ಇರ್ವಿನ್ ಕೆಸ್ಲರ್ ವಿರುದ್ಧ ಫೇಸ್ ಬುಕ್ ನಲ್ಲಿ ಜನಾಂಗೀಯ ನಿಂದನೆಯ ಕಮೆಂಟ್ ಗಳು ಬಂದಿದ್ದವು.

ಈ ಕಮೆಂಟ್ ಗಳನ್ನು ‘ಲೈಕ್’ ಮಾಡಿದ್ದ ವ್ಯಕ್ತಿಯೇ ಈಗ ದಂಡ ಕಟ್ಟುವಂತಾಗಿದೆ. ನಿಂದನಾತ್ಮಕ ಕಮೆಂಟ್ ಗಳಿಗೆ ಲೈಕ್ ಮಾಡುವ ಮೂಲಕ ಮತ್ತೆ ಹಳೆಯ ವಿವಾದವನ್ನು ಕೆದಕಿ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್ ದಂಡ ವಿಧಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...