alex Certify
ಕನ್ನಡ ದುನಿಯಾ       Mobile App
       

Kannada Duniya

ಸೌದಿ ಟಿವಿಯ ಸಂಜೆ ವಾರ್ತೆಯಲ್ಲಿ ಮಹಿಳಾ ಸುದ್ದಿ ವಾಚಕಿ

ಸ್ತ್ರೀ ಸಬಲೀಕರಣದ ವಿಚಾರದಲ್ಲಿ ಸೌದಿ ಅರೇಬಿಯಾದಲ್ಲಿ ಅನೇಕ ಮಹತ್ತರ ಬದಲಾವಣೆಗಳಾಗುತ್ತಿವೆ. ಇತ್ತೀಚೆಗಷ್ಟೇ ಇಲ್ಲಿ ಪ್ರಪ್ರಥಮವಾಗಿ ಮಹಿಳೆಯೊಬ್ಬರಿಗೆ ಡ್ರೈವಿಂಗ್ ಪರವಾನಗಿ ನೀಡಿದ್ದು ಭಾರಿ ಸುದ್ದಿಯಾಗಿತ್ತು. ಇದೀಗ ಸುದ್ದಿ ಮನೆಯಲ್ಲೇ ಮಹಿಳೆಯೊಬ್ಬರು ಕಾರ್ಯ ನಿರ್ವಹಿಸುತ್ತಿರುವುದು ಸುದ್ದಿಯಾಗಿದೆ.

ಸೌದಿ ಅರೇಬಿಯಾದ ಮಾಧ್ಯಮಗಳಲ್ಲಿ ಏನಿದ್ದರೂ ಗಂಡಸರದ್ದೇ ಕಾರುಬಾರು. ನಿಮಗಿಲ್ಲಿ ದುರ್ಬೀನು ಹಾಕಿ ಹುಡುಕಿದರೂ ಮಹಿಳಾ ಪ್ರತಿನಿಧಿಗಳು ಬಹಳ ಅಪರೂಪ. ಇದ್ದರೂ ಬೆಳಗ್ಗೆ ಕಚೇರಿಗೆ ಬಂದು ಕೆಲಸ ಮುಗಿಸಿ ಸಂಜೆ ವೇಳೆ ಮನೆಯಲ್ಲಿರಬೇಕು. ಅಂತಹ ಪರಿಸ್ಥಿತಿಯಿದೆ.

ಅಂಥದ್ದರಲ್ಲಿ ಸರ್ಕಾರಿ ಸ್ವಾಮ್ಯದ ಸೌದಿ ಟಿವಿಯಲ್ಲಿ ಆಂಕರ್ ಆಗಿ ನೇಮಕವಾಗಿರುವ ವಿಯಾಮ್ ಅಲ್ ದಖೀಲ್ ಎಂಬ ಯುವತಿ ಎಲ್ಲರ ಗಮನ ಸೆಳೆದಿದ್ದಾರೆ. ರಾತ್ರಿ 9.30ಕ್ಕೆ ಪ್ರಸಾರವಾಗುವ ವಾರ್ತೆಯಲ್ಲಿ ಸುದ್ದಿ ವಾಚಿಸಿದ ಆಕೆ ಸಂಜೆ ಕಾರ್ಯಕ್ರಮದಲ್ಲಿ ಆಂಕರಿಂಗ್ ಮಾಡಿದ ಸೌದಿಯ ಪ್ರಥಮ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು. 2016ರಲ್ಲಿ ಇದೇ ಚಾನಲ್ ನಲ್ಲಿ ಬೆಳಗ್ಗೆ ಪ್ರಸಾರವಾಗುತ್ತಿದ್ದ ವಾರ್ತೆಯಲ್ಲಿ ಆಂಕರಿಂಗ್ ಮಾಡಿದ್ದ ಜುಮನಾ ಅಲ್ ಶಮಿ ಎಂಬವರು ಸೌದಿಯ ಮೊದಲ ಮಹಿಳಾ ಆಂಕರ್ ಎಂದು ಗುರುತಿಸಲ್ಪಟ್ಟಿದ್ದರು. ಈಗ ಅಂತಹದ್ದೇ ಸಾಧನೆ ಮರುಕಳಿಸಿದೆ.

ಸೌದಿಯ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ತಮ್ಮ ವಿಶನ್ 2030ಯಲ್ಲಿ ಮಹಿಳಾ ಸಬಲೀಕರಣಕ್ಕಾಗಿ ದೇಶವನ್ನು ಆಧುನೀಕರಣಗೊಳಿಸಿ ಮಹತ್ವದ ಹೆಜ್ಜೆಗಳನ್ನು ಇಡಲಾಗುವುದು ಎಂದು ಘೋಷಿಸಿದ ಬಳಿಕ ಇಂತಹ ಬೆಳವಣಿಯಾಗಿರುವುದು ಇಲ್ಲಿನ ಮಹಿಳೆಯರ ಮೊಗದಲ್ಲಿ ನಗು ಅರಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...