alex Certify
ಕನ್ನಡ ದುನಿಯಾ       Mobile App
       

Kannada Duniya

ಮರುಮದುವೆ ಕುರಿತು ಅಂಗೀಕಾರಗೊಂಡಿದೆ ಈ ಕಾನೂನು

ಕರಾಚಿ: ವಿಚ್ಛೇದನ ಪಡೆದ ಅಥವಾ ವಿಧವೆಯಾದ ಹಿಂದು ಮಹಿಳೆ ಮತ್ತೊಂದು ಮದುವೆಯಾಗಬಹುದು ಎಂದು ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಶಾಸನ ಸಭೆ ತೀರ್ಮಾನಿಸಿದೆ. ಈ ಸಂಬಂಧ ಸಿಂಧ್ ಹಿಂದು ವಿವಾಹ(ತಿದ್ದುಪಡಿ) ಕಾಯ್ದೆ 2018 ಯನ್ನು ಅನುಮೋದನೆ ಪಡೆಯಲಾಗಿದೆ. ಪಾಕಿಸ್ತಾನ್‌ ಮುಸ್ಲಿಂ ಲೀಗ್‌ ಫಂಕ್ಷನಲ್‌ ನಾಯಕ ನಂದ್‌ ಕುಮಾರ್‌ ಕಾಯ್ದೆಯನ್ನು ಮಾರ್ಚ್‌ನಲ್ಲಿ ಮಂಡಿಸಿದ್ದರು.

ಈ ಹಿಂದೆ ವಿಚ್ಚೇದನ ಪಡೆದುಕೊಂಡ ಅಥವಾ ವಿಧವೆಯಾದ ಹಿಂದು ಮಹಿಳೆಯರು ಮರು ಮದುವೆಯಾಗುವಂತಿರಲಿಲ್ಲ. ಈಗ ಅನುಮೋದನೆಗೊಂಡಿರುವ ಕಾಯ್ದೆ ಮರು ವಿವಾಹಕ್ಕೆ ಅವಕಾಶ ಕಲ್ಪಿಸಿಕೊಡಲಿದೆ.

ಸಿಂಧ್‌ನಲ್ಲಿನ ಹಿಂದುಗಳು, ಬಾಲ್ಯ ವಿವಾಹ ಪದ್ದತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೋರಾಟ ನಡೆಸುತ್ತಿದ್ದರು. ಹಳೆಯ ಕಟ್ಟುಪಾಡುಗಳನ್ನು ಬಿಟ್ಟು, ಸಾಮಾಜಿಕ ನ್ಯಾಯದತ್ತ ಹೆಜ್ಜೆ ಇಡಲಾಗುತ್ತಿದೆ. ಮಹಿಳೆಯರಿಗೂ ತಮ್ಮ ಇಚ್ಛೆಯಂತೆ ಬದುಕುವ ಅವಕಾಶವಿದೆ. ವಿಧವೆ ಅಥವಾ ವಿಚ್ಛೇದನ ಪಡೆದ ಹಿಂದು ಮಹಿಳೆಯರು ಮತ್ತೊಂದು ಮದುವೆಯಾಗುವುದು ಸಂಸ್ಕಾರಕ್ಕೆ ವಿರುದ್ಧ ಎಂಬ ಭಾವನೆ ಬಿಡಬೇಕಿದೆ ಎಂದು ನಂದ್‌ ಕುಮಾರ್ ಹೇಳಿದ್ದಾರೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...