alex Certify
ಕನ್ನಡ ದುನಿಯಾ       Mobile App
       

Kannada Duniya

ಅದ್ಭುತವಾಗಿತ್ತು ‘ಅಮೆಜಾನ್’ ಮೊದಲ ಡ್ರೋನ್ ಡೆಲಿವರಿ

amazon

ಇದೇ ಮೊದಲ ಬಾರಿಗೆ ಅಮೆಜಾನ್ ಡ್ರೋನ್ ಮೂಲಕ ಪ್ಯಾಕೇಜ್ ಡೆಲಿವರಿ ಮಾಡಿದೆ. ಆರ್ಡರ್ ಪ್ಲೇಸ್ ಮಾಡಿ ಕೇವಲ 13 ನಿಮಿಷಗಳಲ್ಲಿ ಗ್ರಾಹಕರಿಗೆ ಡೆಲಿವರಿ ಕೊಟ್ಟಿರೋದು ವಿಶೇಷ.

ಇಂಗ್ಲೆಂಡ್ ನ ಕೇಂಬ್ರಿಡ್ಜ್ ನಲ್ಲಿರೋ ಗ್ರಾಹಕರೊಬ್ಬರಿಗೆ ಡ್ರೋನ್ ಮೂಲಕ ಉತ್ಪನ್ನವನ್ನು ಕಳುಹಿಸಿಕೊಡಲಾಗಿದೆ. ಈ ವಿಚಾರವನ್ನು ಅಮೆಜಾನ್ ಸಂಸ್ಥಾಪಕ ಜೆಫ್ ಬಿಜೋಸ್ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ರಿಚರ್ಡ್ ಬಿ ಎಂಬಾತ ಒಂದು ಅಮೆಜಾನ್ ಫೈರ್ ಟಿವಿ ಹಾಗೂ ಪಾಪ್ ಕಾರ್ನ್ ಬ್ಯಾಗನ್ನು ಆರ್ಡರ್ ಮಾಡಿದ್ದ. ಅದನ್ನು ಡ್ರೋನ್ ಮೂಲಕ ಆತನಿಗೆ ತಲುಪಿಸಲಾಗಿದೆ. ಅಮೆಜಾನ್ ನ ಮೊದಲ ಡ್ರೋನ್ ಡೆಲಿವರಿ ಯಾವ ರೀತಿ ಇತ್ತು ಅನ್ನೋದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ.

ಆ ವಿಡಿಯೋವನ್ನು ಅಮೆಜಾನ್ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಬ್ರಿಟನ್ ನ ಗ್ರಾಮೀಣ ಭಾಗ ಮತ್ತು ಉಪನಗರಗಳಲ್ಲಿ ಡ್ರೋನ್ ಹಾರಾಟ ನಡೆಸಲು ಈ ವರ್ಷ ಅಮೆಜಾನ್ ಗೆ ಅನುಮತಿ ದೊರೆತಿತ್ತು. ಆದ್ರೆ ಸಾರ್ವಜನಿಕರು ಮಾತ್ರ ಡ್ರೋನ್ ಡೆಲಿವರಿ ಐಡಿಯಾ ಬಗ್ಗೆ ಸಂತಸಗೊಂಡಿಲ್ಲ, ಇದರಿಂದ ಅಪಾಯವೇ ಹೆಚ್ಚು ಅಂತಾ ಅಭಿಪ್ರಾಯಪಟ್ಟಿದ್ದಾರೆ.

 

 

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...