alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷಣಾರ್ಧದಲ್ಲೇ ಐಸ್ ಆಗಿದೆ ಕುದಿಯುತ್ತಿದ್ದ ನೀರು…!

ಈಗ ಚಳಿಗಾಲದ ಸಮಯ ಮೈ ಕೊರೆಯುವ ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆಯ ಉಡುಪಿನ ಮೊರೆ ಹೋಗುವುದರ ಜೊತೆಗೆ ಬೆಂಕಿ ಮುಂದೆ ಚಳಿ ಕಾಯಿಸಿಕೊಳ್ಳುವ ದೃಶ್ಯ ಈ ಋತುವಿನಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ.

ಕೆನಡಾದಲ್ಲೂ ಈಗ ಭಾರೀ ಚಳಿ ಗಾಳಿಯಿದ್ದು, ಈ ವಾತಾವರಣದ ಕಾರಣದಿಂದಾಗಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಜನ ಮನೆಯಿಂದ ಹೊರ ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ. 1993 ರಲ್ಲಿ -40 ಡಿಗ್ರಿ ಉಷ್ಣಾಂಶ ದಾಖಲಾಗಿದ್ದು, ಇದುವರೆಗಿನ ದಾಖಲೆಯಾಗಿದೆ.

ಇದೀಗ -30 ಡಿಗ್ರಿಗೂ ಅಧಿಕ ಉಷ್ಣಾಂಶವಿದ್ದು. ಈ ಸಂದರ್ಭದಲ್ಲಿ ಎಡ್ಮಂಟನ್ ವಾಸಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ವಿಡಿಯೋ ಒಂದು ವೈರಲ್ ಆಗಿದೆ. ಕುದಿಯುತ್ತಿರುವ ನೀರನ್ನು ಅವರು ಮೇಲೆರೆಚ್ಚಿದ್ದು, ಕ್ಷಣಾರ್ಧದಲ್ಲಿಯೇ ಈ ನೀರು ಮಂಜುಗಡ್ಡೆಯಾಗಿ ಪರಿವರ್ತನೆಯಾಗಿದೆ. ಈ ವಿಡಿಯೋ ಚಳಿಯ ತೀವ್ರತೆಯನ್ನು ಪ್ರತಿಬಿಂಬಿಸುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...