alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ಕಛೇರಿ ಪ್ರವೇಶಿಸಲು ಮಹಿಳೆಯರು ದುಪ್ಪಟ್ಟಾ ಧರಿಸಬೇಕು…!

ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ವೇಳೆ ಇಮ್ರಾನ್ ಖಾನ್ ಹೊಸ ಪಾಕಿಸ್ತಾನದ ಭರವಸೆ ನೀಡಿದ್ದರು. ಖಾನ್‌ರ ಈ ನಯಾ ಪಾಕಿಸ್ತಾನದಲ್ಲಿ ಹೊಸ ಹೊಸ ನಿಯಮಗಳು ಜಾರಿಗೆ ಬರುತ್ತಿವೆ.

ಪಂಜಾಬ್‌ನ ಪ್ರಾಥಮಿಕ ಹಾಗೂ ದ್ವಿತೀಯ ಆರೋಗ್ಯ ಸೇವಾ ಸಚಿವ ಡಾ.ಯಾಸ್ಮಿನ್ ರಶೀದ್ ಅವರು ಹೊರಡಿಸಿರುವ ಆದೇಶದ ಪ್ರಕಾರ, ಲಾಹೋರ್‌ನಲ್ಲಿನ ಪಂಜಾಬ್ ಸಿವಿಲ್ ಸೆಕ್ರೆಟರಿಯೆಟ್ ಪ್ರವೇಶಿಸಲು ಮಹಿಳೆಯರಿಗೆ ಹೆಡ್‌ಸ್ಕಾರ್ಫ್ ಅಥವಾ ದುಪ್ಪಟ್ಟಾ ಇರಲೇಬೇಕು. ದುಪ್ಪಟ್ಟಾ ಇಲ್ಲದ ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಗಿದೆ.

ಸಿದ್ರಾ ಬಟ್ ತಮ್ಮ ಅನುಭವವನ್ನು ರೆಕಾರ್ಡ್ ಮಾಡಿದ್ದು, ಟ್ವಿಟರ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ಹೆಡ್ ಸ್ಕಾರ್ಫ್ ಧರಿಸದ ಕಾರಣಕ್ಕೆ ನನಗೆ ಸೆಕ್ರೆಟೆರಿಯೆಟ್‌ಗೆ ಪ್ರವೇಶ ನಿರಾಕರಿಸಲಾಯಿತು ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಪಾಕಿಸ್ತಾನದಲ್ಲಿ ಭಾರೀ ವೈರಲ್ ಆಗಿದ್ದು, ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ನೆಟ್ಟಿಗರು ಬಟ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...