alex Certify
ಕನ್ನಡ ದುನಿಯಾ       Mobile App
       

Kannada Duniya

ಇಮ್ರಾನ್ ಖಾನ್ ಮಾಜಿ ಪತ್ನಿಗೆ ಲೀಗಲ್ ನೋಟೀಸ್

ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಹಾಲಿ ರಾಜಕಾರಣಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಂ ಖಾನ್ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ರೆಹಂ ಖಾನ್, ಮಾಜಿ ಕ್ರಿಕೆಟಿಗ ವಸೀಮ್ ಅಕ್ರಮ್ ಸೇರಿದಂತೆ ನಾಲ್ಕು ಜನರ ದಾಂಪತ್ಯ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಮುಂಬರುವ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆನ್ನಲಾಗಿದೆ.

ಈ ಹಿನ್ನಲೆಯಲ್ಲಿ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಕೆಯ ಮಾಜಿ ಪತಿ ಡಾ. ಇಜಾಜ್ ರೆಹ್ಮಾನ್, ಕ್ರಿಕೆಟಿಗ ವಸೀಮ್ ಅಕ್ರಮ್, ಬ್ರಿಟೀಷ್ ಮೂಲದ ಉದ್ಯಮಿ ಸೈಯದ್ ಜುಲ್ಫಿಕರ್ ಬುಖಾರಿ, ಇಮ್ರಾನ್ ಖಾನ್ ಅವರ ಮಾಧ್ಯಮ ಸಲಹೆಗಾರ ಅನಿಲಾ ಖ್ವಾಜಾ ತಮಗೆ ಮಾನನಷ್ಟವಾಗಿದೆ ಎಂದು ಕಾನೂನು ಸಲಹೆಗೆ ಮುಂದಾಗಿದ್ದಾರೆ.

ರೆಹಂ ಖಾನ್ ಅವರ ಪುಸ್ತಕದಲ್ಲಿ ಅಂತಹದ್ದೇನಿದೆ…?

ಸುಮಾರು 402 ರಿಂದ 572 ಪುಟಗಳುಳ್ಳ ಪುಸ್ತಕವನ್ನು ಆನ್ ಲೈನ್ ಮೂಲಕ ಪುಸ್ತಕದ ತುಣುಕುಗಳನ್ನು ಬಿತ್ತರಿಸಲಾಗಿದೆ. ಅದರಲ್ಲಿ ಸುಳ್ಳು, ಅರ್ಥವಿಲ್ಲದ, ಪ್ರಚೋದನಾಕಾರಿ, ಲೈಂಗಿಕ ಸಂಬಂಧ, ಅಸಂಬದ್ಧವಾದ, ತರ್ಕವಿಲ್ಲದ, ಮಾನಹಾನಿ ಮಾಡುವ ವಾಕ್ಯಗಳನ್ನು ಬಳಸಲಾಗಿದೆ. ಇದರಿಂದ ತಮಗೆ ಅವಮಾನವಾಗುತ್ತಿದೆ ಎಂಬ ನಿಟ್ಟಿನಲ್ಲಿ ಈ ನೋಟಿಸ್ ನೀಡಲಾಗಿದೆ.

ಕಳೆದ ಮೇ 30 ರಂದು ಲಂಡನ್ ಲಾ ಸಂಸ್ಥೆಯವರು ರಹಂ ಖಾನ್ ಗೆ ನೋಟಿಸ್ ಜಾರಿ ಮಾಡಿದ್ದಾರೆ. ಯಾವುದೇ ಮಾನಹಾನಿ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿದ್ದರೆ, ಅದನ್ನು ಈ ಕೂಡಲೇ ತೆಗೆದು ಹಾಕಬೇಕು. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಪ್ರಚೋದನಾಕಾರಿ, ಅಪಪ್ರಚಾರದ ಮಾತುಗಳನ್ನು ಹಾಕುವಂತಿಲ್ಲ ಎಂದು ತಿಳಿಸಿದೆ. ಅದರಂತೆ, ಆಕೆಯೂ ಮುಂದೆ ಈ ರೀತಿ ಪ್ರಕಟಣೆಗಳನ್ನು ಬಿತ್ತರಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...