alex Certify
ಕನ್ನಡ ದುನಿಯಾ       Mobile App
       

Kannada Duniya

524 ಸೇವಕರು, 80 ಕಾರಿರುವ ಪಿಎಂ ನಿವಾಸದಲ್ಲಿ ವಾಸಿಸಲ್ಲ ಇಮ್ರಾನ್ ಖಾನ್

ಪಾಕಿಸ್ತಾನದ ನೂತನ ಪ್ರಧಾನ ಮಂತ್ರಿ ಇಮ್ರಾನ್ ಖಾನ್, ಪಿಎಂ ನಿವಾಸದಲ್ಲಿ ವಾಸವಾಗುವುದಿಲ್ಲವಂತೆ. ಇಮ್ರಾನ್ ಖಾನ್ ಸೇನಾ ಸಚಿವರ ನಿವಾಸದಲ್ಲಿ ನೆಲೆಸಲಿದ್ದಾರಂತೆ. ಭಾನುವಾರ ಪಿಎಂ ಹುದ್ದೆಗೇರಿದ ನಂತ್ರ ಮೊದಲ ಬಾರಿ ಸಾರ್ವಜನಿಕ ಭಾಷಣ ಮಾಡಿದ ಇಮ್ರಾನ್ ಖಾನ್ ಈ ವಿಷ್ಯವನ್ನು ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ ಹೆಚ್ಚಾಗ್ತಿರುವ ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಇಮ್ರಾನ್ ಖಾನ್ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ತಮ್ಮ ಸ್ವಂತ ನಿವಾಸದಲ್ಲಿಯೇ ಇಮ್ರಾನ್ ವಾಸವಾಗಲು ನಿರ್ಧರಿಸಿದ್ದರಂತೆ. ಆದ್ರೆ ಅವ್ರ ಪ್ರಾಣಕ್ಕೆ ಅಪಾಯವಿದೆ ಎಂಬ ಸೂಚನೆ ಮೇರೆಗೆ ಸೇನಾ ಸಚಿವರ ನಿವಾಸದಲ್ಲಿ ನೆಲೆಸಲಿದ್ದಾರಂತೆ.

ಪಾಕಿಸ್ತಾನದ ಪ್ರಧಾನ ಮಂತ್ರಿ ನಿವಾಸದಲ್ಲಿ 524 ಸೇವಕರು ಹಾಗೂ 80 ಕಾರುಗಳಿವೆ. ಇಮ್ರಾನ್ ಖಾನ್ ಬಳಿ 33 ಬುಲೆಟ್ ಪ್ರೂಫ್ ಕಾರುಗಳಿವೆ. ವಿಮಾನ ಹಾಗೂ ಹೆಲಿಕಾಪ್ಟರ್ ಕೂಡ ಇಮ್ರಾನ್ ಖಾನ್ ಬಳಿಯಿದೆ. ಪಾಕಿಸ್ತಾನದಲ್ಲಿ ಕೆಲ ಜನರ ಬಳಿ ಊಟಕ್ಕೂ ಹಣವಿಲ್ಲ. ಮತ್ತೆ ಕೆಲವರ ಬಳಿ ಕೊಳೆಯುವಷ್ಟು ಹಣವಿದೆ. ಪಾಕಿಸ್ತಾನದ ವೆಚ್ಚ ಕಡಿಮೆ ಮಾಡಲು ನಾನು ಮೊದಲ ಹೆಜ್ಜೆಯಿಡುತ್ತಿದ್ದೇನೆ. 524 ಸೇವಕರ ಬದಲು ಇಬ್ಬರು ಸೇವಕರು ನನಗೆ ಸಾಕು. ಜೊತೆಗೆ 3 ಬೆಡ್ ರೂಂ ಮನೆಯಲ್ಲಿ ನಾನು ವಾಸ ಮಾಡುತ್ತೇನೆಂದು ಅವ್ರು ಹೇಳಿದ್ದಾರೆ. ಎರಡು ಕಾರುಗಳು ಮಾತ್ರ ನನಗೆ ಸಾಕು. ಉಳಿದ ಕಾರುಗಳನ್ನು ಸರ್ಕಾರ ಮಾರಾಟ ಮಾಡಲಿದ್ದು, ಖರೀದಿದಾರರು ಮುಂದೆ ಬರಬಹುದೆಂದು ಇಮ್ರಾನ್ ಖಾನ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...