alex Certify
ಕನ್ನಡ ದುನಿಯಾ       Mobile App
       

Kannada Duniya

ಮುಖ ನೋಡದೆ ಈ ಮಹಿಳೆ ಮದುವೆಯಾದ ಇಮ್ರಾನ್ ಖಾನ್…!

ಮಾಜಿ ಕ್ರಿಕೆಟರ್ ಹಾಗೂ ಈಗಿನ ರಾಜಕಾರಣಿ  ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿ ಪಟ್ಟಕ್ಕೇರುತ್ತಿದ್ದಾರೆ. ಪಾಕಿಸ್ತಾನದಲ್ಲಿ ನಡೆದ ಸಾರ್ವಜನಿಕ ಚುನಾವಣೆಗೂ ಮುನ್ನ ಇಮ್ರಾನ್ ಖಾನ್ ತಮ್ಮ ಖಾಸಗಿ ಬದುಕಿನ ಅನೇಕ ವಿಷ್ಯಗಳನ್ನು ಜನರ ಮುಂದಿಟ್ಟಿದ್ದರು.

65 ವರ್ಷದ ಇಬ್ರಾನ್ 39 ವರ್ಷದ ಮಹಿಳೆ ಮುಖ ನೋಡದೆ ಮದುವೆಯಾಗಿದ್ದಾರಂತೆ. ಅವ್ರ ಹೆಸರು ಬುಷ್ರಾ ಮನೆಕಾ. ಇಮ್ರಾನ್ ಅನೇಕ ಬಾರಿ ಬುಷ್ರಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರಂತೆ. ಆದ್ರೆ ಪ್ರತಿ ಬಾರಿಯೂ ಮುಖ ನೋಡದೆ ಮಾತನಾಡಿದ್ದರಂತೆ. 2018 ರ ಫೆಬ್ರವರಿಯಲ್ಲಿ ಬುಷ್ರಾರನ್ನು ಇಮ್ರಾನ್ ಮದುವೆಯಾಗಿದ್ದಾರೆ. ಸಂಪ್ರದಾಯಿಕ ಕುಟುಂಬದ ಬುಷ್ರಾ ಸದಾ ಬುರ್ಕಾ ಧರಿಸುತ್ತಿದ್ದರಂತೆ. ಪತಿ ಬಿಟ್ಟು ಮತ್ಯಾರಿಗೂ ಮುಖ ತೋರಿಸಬಾರದು ಎಂಬ ಪದ್ಧತಿ ಅವ್ರಲ್ಲಿದೆ. ಹಾಗಾಗಿ ಇಮ್ರಾನ್ ಮುಖ ನೋಡದೆ ಬುಷ್ರಾರನ್ನು ಮದುವೆಯಾದ್ರಂತೆ.

ಬುಷ್ರಾರ ಬಾಲ್ಯದ ಫೋಟೋ ನೋಡಿದ್ದ ಇಮ್ರಾನ್, ಬುಷ್ರಾ ಹೀಗೆ ಇರಬಹುದೆಂದು ಊಹಿಸಿದ್ದರಂತೆ. ಮೊದಲ ಬಾರಿ ಬುಷ್ರಾ ಮುಖ ನೋಡಿದಾಗ ನನಗೆ ನಿರಾಶೆಯಾಗಲಿಲ್ಲ ಎಂದಿದ್ದಾರೆ ಇಮ್ರಾನ್. 39 ಬರ್ಷದ ಬುಷ್ರಾ 5 ಮಕ್ಕಳ ತಾಯಿ. ಬುಷ್ರಾ 3 ವರ್ಷಗಳ ಹಿಂದೆ ಇಮ್ರಾನ್ ಭೇಟಿಯಾಗಿದ್ದರು.

ಇದಕ್ಕೂ ಮುನ್ನ ಇಮ್ರಾನ್ ಎರಡು ಬಾರಿ ಮದುವೆಯಾಗಿದ್ದರು. ಮೊದಲ ಮದುವೆ 1995 ರಲ್ಲಿ ನಡೆದ್ರೆ ಎರಡನೇ ಮದುವೆ 2015 ರಲ್ಲಿ ನಡೆದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...