alex Certify
ಕನ್ನಡ ದುನಿಯಾ       Mobile App
       

Kannada Duniya

ಆ.18 ಕ್ಕೆ ಪಾಕ್‌ ಪ್ರಧಾನಿಯಾಗಿ ಇಮ್ರಾನ್‌ ಪ್ರಮಾಣವಚನ

ಪಾಕಿಸ್ತಾನ ನಿಯೋಜಿತ ಪ್ರಧಾನ ಮಂತ್ರಿ, ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ಆ.18ಕ್ಕೆ ಪ್ರಮಾಣವನ ಸ್ವೀಕರಿಸಲಿದ್ದಾರೆ. ಸಮಾರಂಭಕ್ಕೆ ಭಾರತೀಯ ಕ್ರಿಕೆಟ್‌ ಮಾಜಿ ನಾಯಕ ಕಪಿಲ್‌ ದೇವ್‌, ಆಟಗಾರರಾದ ಸುನಿಲ್‌ ಗಾವಸ್ಕರ್‌, ನವಜೋತ್‌ ಸಿಂಗ್‌ ಸಿದ್ದು ಅವರನ್ನು ಆಹ್ವಾನಿಸಲಾಗಿದೆ ಎಂದು ಸೆನೆಟರ್‌ ಫೈಸಲ್‌ ಜಾವೆದ್‌ ಟ್ವೀಟ್‌ ಮಾಡಿದ್ದಾರೆ.

ಇಮ್ರಾನ್‌ ಖಾನ್‌ ಪಾಕಿಸ್ತಾನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ- ಇನ್‌ಶಾ ಅಲ್ಲಾ ಎಂದು ಜಾವೇದ್‌ ಟ್ವೀಟ್‌ ಮಾಡಿದ್ದಾರೆ. ನೂತನವಾಗಿ ರಾಷ್ಟ ಪ್ರತಿನಿಧಿಗಳಾಗಿ ಆಯ್ಕೆಯಾದ ಸಂಸದರು ಆ.13 ರಂದು ಪ್ರಮಾಣವಚನ ಸ್ವೀಕರಿಸಲಿದ್ದು, ಇಮ್ರಾನ್‌ ಖಾನ್‌ ಅಧಿಕೃತವಾಗಿ ಆಡಳಿತ ಪಕ್ಷದ ನಾಯಕನಾಗಿ ಘೋಷಣೆಯಾಗಲಿದೆ. ಬಳಿಕ ಪ್ರಧಾನ ಮಂತ್ರಿಯಾಗಲಿದ್ದಾರೆ.

ಇಮ್ರಾನ್‌ ಖಾನ್‌ರ ತಹ್ರೀಕ್‌ -ಎ- ಇನ್ಸಾಫ್‌ ಪಕ್ಷ 116 ಸೀಟುಗಳನ್ನು ಗಳಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಆಯ್ಕೆಯಾಗಿದೆ. ಐದು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಇಮ್ರಾನ್‌ ಖಾನ್‌, ಎಲ್ಲಾ ಕ್ಷೇತ್ರಗಳಲ್ಲಿ ಜಯಗಳಿಸಿದ್ದರು. ಆ.13ರಂದು ನಡೆಯುವ ಅಧಿವೇಶನದಲ್ಲಿ ಇಮ್ರಾನ್‌ ಖಾನ್‌ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. 28 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದು, ಎಲ್ಲರೂ ಇಮ್ರಾನ್‌ ಖಾನ್‌ಗೆ ಬೆಂಬಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...