alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಪ್ರಧಾನಿ ಪ್ರಮಾಣವಚನ ಸಮಾರಂಭಕ್ಕೆ ವಿದೇಶಿ ಗಣ್ಯರಿಗಿಲ್ಲ ಅಹ್ವಾನ

ಪಾಕಿಸ್ತಾನ ನಿಯೋಜಿತ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಅವರ ಪ್ರಮಾಣವಚನದಲ್ಲಿ ವಿದೇಶಿ ಗಣ್ಯರಿಗೆ ಆಹ್ವಾನ ನೀಡುವುದಿಲ್ಲ ಎಂದು ಗೊತ್ತಾಗಿದೆ.

ಆ.11 ರಂದು ನಡೆಯಲಿರುವ ಪ್ರಮಾಣ ವಚನ ಸಮಾರಂಭಕ್ಕೆ ಚೀನಾ, ಟರ್ಕಿ ಸೇರಿದಂತೆ ವಿವಿಧ ದೇಶದ ರಾಜಕೀಯ ಮುಖಂಡರನ್ನು ಆಮಂತ್ರಿಸಲು ಉದ್ಧೇಶಿಸಲಾಗಿತ್ತು. ಆದರೆ ಇದೀಗ ಸಮಾರಂಭ ಸಂಪೂರ್ಣ ರಾಷ್ಟ್ರೀಯ ಕಾರ್ಯಕ್ರಮವಾಗಲಿದೆ. ಇಮ್ರಾನ್‌ ಖಾನ್‌ ರ ಆಪ್ತರನ್ನು ಮಾತ್ರ ಆಮಂತ್ರಿಸಲಾಗುತ್ತದೆ ಎಂದು ಪಿಟಿಐ ಪಾರ್ಟಿಯ ವಕ್ತಾರರು ತಿಳಿಸಿದ್ದಾರೆ.

ವಿದೇಶದಲ್ಲಿರುವ ಇಮ್ರಾನ್‌ ಖಾನ್‌ ಸ್ನೇಹಿತರನ್ನಷ್ಟೇ ಸಮಾರಂಭಕ್ಕೆ ಆಹ್ವಾನಿಸಲಾಗುತ್ತದೆ. ಮೂಲಗಳ ಪ್ರಕಾರ, ವಿದೇಶಿ ಗಣ್ಯರಿಗೆ ಆಹ್ವಾನ ನೀಡುವುದು ಬೇಡ ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್ ಸಮಕಾಲೀನರಾದ ಹಾಗೂ ಕ್ರಿಕೆಟ್ ಜಗತ್ತಿನ ಖ್ಯಾತನಾಮರಾದ ಕಪಿಲ್ ದೇವ್, ಸುನಿಲ್ ಗವಾಸ್ಕರ್, ನವಜೋತ್ ಸಿಂಗ್ ಸಿಧು, ಬಾಲಿವುಡ್‌ ನಟ ಅಮೀರ್‌ಖಾನ್‌ಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಕ್ಷ ಆಹ್ವಾನ ನೀಡಿದೆ ಎಂದು ಪಾಕ್‌ನ ಕೆಲ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಬಗ್ಗೆಯೂ ಮಾತುಗಳು ಕೇಳಿ ಬಂದಿದ್ದವು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...