alex Certify
ಕನ್ನಡ ದುನಿಯಾ       Mobile App
       

Kannada Duniya

3 ನೇ ಪತ್ನಿಗೂ ವಿಚ್ಛೇದನ ಕೊಡ್ತಿದ್ದಾರಂತೆ ಇಮ್ರಾನ್…!

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್, ತಮ್ಮ ಮೂರನೇ ಪತ್ನಿಗೂ ವಿಚ್ಛೇದನ ನೀಡಲು ಸಜ್ಜಾಗಿದ್ದಾರಂತೆ. ಮೂರನೇ ಪತ್ನಿ ಬುಶ್ರಾ ಮನೇಕಾ ಹಾಗೂ ಇಮ್ರಾನ್ ಖಾನ್ ಮಧ್ಯೆ ಕೌಟುಂಬಿಕ ಕಲಹ ಶುರುವಾಗಿದೆ.

ಇದರಿಂದ ಬೇಸತ್ತು ಬುಶ್ರಾ ಮನೇಕಾ ತವರಿಗೆ ಮರಳಿದ್ದಾಳಂತೆ. ತಿಂಗಳ ಹಿಂದಷ್ಟೆ ಇಮ್ರಾನ್ ಖಾನ್ ಹಾಗೂ ಬುಶ್ರಾ ಮನೇಕಾ ವಿವಾಹ ನೆರವೇರಿತ್ತು. ಬುಶ್ರಾ ಮನೇಕಾಗೆ ಇದು ಎರಡನೇ ಮದುವೆ. ಮೊದಲ ಪತಿಯಿಂದ ಮಕ್ಕಳು ಸಹ ಇದ್ದಾರೆ.

ಹಾಗಾಗಿ ಇಮ್ರಾನ್ ಖಾನ್ ಹಾಗೂ ಬುಶ್ರಾ ಜೊತೆ ಆ ಮಕ್ಕಳ್ಯಾರೂ ವಾಸಿಸಬಾರದು ಅನ್ನೋ ಒಪ್ಪಂದವಿತ್ತು. ಆದ್ರೆ ಬುಶ್ರಾಳ ಮಗ ಖವಾರ್ ಫರೀದ್ ಎಂಬಾತ ಇಮ್ರಾನ್ ಖಾನ್ ನಿವಾಸದಲ್ಲೇ ತಂಗಿದ್ದ. ಇದು ಇಮ್ರಾನ್ ಅಸಮಾಧಾನಕ್ಕೆ ಕಾರಣವಾಯ್ತು.

ಇಷ್ಟೇ ಅಲ್ಲ ಇಮ್ರಾನ್ ಖಾನ್ ಸಾಕಿದ್ದ ಮುದ್ದಿನ ನಾಯಿಗಳು ಸಹ ದಂಪತಿ ಮಧ್ಯೆ ಕಲಹಕ್ಕೆ ಕಾರಣವಾಗಿವೆ ಎನ್ನಲಾಗ್ತಿದೆ. ಬುಶ್ರಾ ಮನೇಕಾ ಆಧ್ಯಾತ್ಮಿಕ ಸಲಹೆಗಾರ್ತಿಯಾಗಿದ್ದವಳು. ಇಮ್ರಾನ್ ನಾಯಿಗಳನ್ನು ಮನೆಯಲ್ಲಿಟ್ಟುಕೊಳ್ಳುವುದು ಆಕೆಗೆ ಇಷ್ಟವಿರಲಿಲ್ಲ. ಈ ಎಲ್ಲಾ ವಿಚಾರಗಳಿಂದಾಗಿ ದಂಪತಿ ಮದುವೆಯಾಗಿ ತಿಂಗಳಲ್ಲೇ ದೂರವಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...