alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿನ ಸನಿಹದಲ್ಲೂ ಬಿಯರ್ ಗ್ಲಾಸ್ ಬಿಡದ ಭೂಪ..!

image-shows-man-fleeing-london-terror-attack-site-with-a-pint-of-beer-in-handಕೇವಲ ಎರಡು ವಾರಗಳ ಹಿಂದಷ್ಟೇ ಮ್ಯಾಂಚೆಸ್ಟರ್ ಅರೆನಾದಲ್ಲಿ ದುಷ್ಕೃತ್ಯ ಎಸಗಿದ್ದ ಉಗ್ರರು ಶನಿವಾರದಂದು ಲಂಡನ್ ಬ್ರಿಡ್ಜ್ ಬಳಿ ತಮ್ಮ ಅಟ್ಟಹಾಸ ಮೆರೆದಿದ್ದರು. ಒಟ್ಟು ಮೂರು ಸ್ಥಳಗಳಲ್ಲಿ ದಾಳಿ ನಡೆಸಿದ್ದ ಉಗ್ರರು 7 ಮಂದಿಯನ್ನು ಹತ್ಯೆ ಮಾಡಿದ್ದು, ಬಳಿಕ ಪೊಲೀಸರು ಅವರನ್ನು ಹೊಡೆದುರುಳಿಸಿದ್ದರು.

ಇದೀಗ ಘಟನೆ ನಡೆದ ದಿನದಂದು ಸೆರೆಯಾದ ದೃಶ್ಯಾವಳಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಪಾದಚಾರಿಗಳ ಮೇಲೆ ಉಗ್ರರು ವಾಹನ ಹರಿಸಿದ್ದಲ್ಲದೇ ಸಿಕ್ಕಸಿಕ್ಕವರನ್ನು ಹರಿತವಾದ ಆಯುಧದಿಂದ ಇರಿದಿದ್ದರು.

ಇದರಿಂದ ಗಾಬರಿಗೊಳಗಾದ ಸಾರ್ವಜನಿಕರು ಪ್ರಾಣ ರಕ್ಷಿಸಿಕೊಳ್ಳಲು ಭಯಭೀತರಾಗಿ ಓಡುತ್ತಿರುವ ಮಧ್ಯೆ ಯುವಕನೊಬ್ಬ ಅಂತಹ ಸ್ಥಿತಿಯಲ್ಲೂ ಕೈಯ್ಯಲ್ಲಿ ಬಿಯರ್ ಗ್ಲಾಸ್ ಹಿಡಿದು ಆರಾಮಾಗಿ ಸಾಗಿದ್ದಾನೆ. ಹಲವರು ಈತನನ್ನು ದಾಟಿಕೊಂಡು ಓಡುತ್ತಿದ್ದರೂ ಈತ ಮಾತ್ರ ಬಿಯರ್ ಗ್ಲಾಸ್ ಹಿಡಿದು ಹೆಜ್ಜೆ ಹಾಕಿದ್ದಾನೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿರುವವರು ಸಾವಿನ ಸನಿಹದಲ್ಲೂ ಎದೆಗುಂದದ ಯುವಕನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...