alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರಿಗೆ ಶರಣಾಗಿದ್ದಾನೆ ನರಭಕ್ಷಕ…!

ದಕ್ಷಿಣ ಆಫ್ರಿಕಾದಲ್ಲಿ ನರಭಕ್ಷಕನೊಬ್ಬ ತಾನೇ ಪೊಲೀಸರೆದುರು ಶರಣಾಗಿದ್ದಾರೆ. ದೇಹದ ಅಂಗಾಂಗಗಳನ್ನು ಪೊಲೀಸರಿಗೆ ಒಪ್ಪಿಸಿ, ತನಗೆ ಮನುಷ್ಯರ ಮಾಂಸ ತಿಂದು ಸಾಕಾಗಿ ಹೋಗಿದೆ ಅಂತಾ ಹೇಳಿದ್ದಾನೆ. ತಾನೊಬ್ಬ ನಾಟಿ ವೈದ್ಯ ಅಂತಾ ಆತ ಹೇಳಿಕೊಂಡಿದ್ದ.

ಮದ್ದು ಕೇಳಲು ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಅವಳನ್ನು ಕತ್ತರಿಸಿ ಹಾಕಿದ್ದ. ಅಷ್ಟೇ ಅಲ್ಲ ಮಹಿಳೆಯನ್ನು ಕೊಂದು ಆತ ತಿಂದಿದ್ದಾನೆ ಅಂತಾ ಹೇಳಲಾಗ್ತಿದ್ದು, ಅವನೊಬ್ಬ ನರಭಕ್ಷಕ ಅಂತಾ ಜನರು ಭಯಪಡ್ತಿದ್ದಾರೆ.

ನರಭಕ್ಷಕ, ಮನುಷ್ಯನ ಕೈ ಮತ್ತು ಕಾಲುಗಳನ್ನು ತೆಗೆದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾನೆ. ತಾನು ಮನುಷ್ಯರನ್ನು ಕೊಂದು ತಿಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನ ಮನೆಯಲ್ಲಿ ಕೂಡ ಮನುಷ್ಯರ ಅವಶೇಷಗಳು ದೊರೆತಿವೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನಿಬ್ಬರನ್ನು ಸಹ ಬಂಧಿಸಲಾಗಿದೆ.

ನಾಲ್ವರು ನರಭಕ್ಷಕರ ಗ್ಯಾಂಗ್ ಅನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ. ಗಡಿಗೆಯೊಂದರಲ್ಲಿ 8 ಕಿವಿಗಳು ಸಿಕ್ಕಿದ್ದು, ನರಭಕ್ಷಕರು ಎಷ್ಟು ಜನರನ್ನು ಹತ್ಯೆ ಮಾಡಿದ್ದಾರೆ ಅನ್ನೋದು ಇನ್ನೂ ಖಚಿತವಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...