alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ಹೇಳಿಕೆ ನೀಡಿದ ಪಾಕ್ ಮಾಜಿ ಅಧ್ಯಕ್ಷ ಮುಷರಫ್

ನಾನು ಹಫೀಜ್ ಸಯೀದ್ ಬೆಂಬಲಿಗನಾಗಿದ್ದೇನೆ. ಕಾಶ್ಮೀರದಲ್ಲಿ ಲಷ್ಕರ್ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಹೇಳಿದ್ದಾರೆ.

26/11 ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಜಾಗತಿಕ ಉಗ್ರನೆಂದು ಘೋಷಿಸಲಾಗಿದೆ. ಅಂತಹ ಉಗ್ರನ ಅತಿದೊಡ್ಡ ಬೆಂಬಲಿಗನಾಗಿದ್ದೇನೆ ಎಂದು ಮುಷರಫ್ ಹೇಳಿರುವುದು ಚರ್ಚೆಗೆ ಕಾರಣವಾಗಿದೆ.

ಪಾಕಿಸ್ತಾನ ಟಿ.ವಿ. ಚಾನಲ್ ಎ.ಆರ್.ವೈ. ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಮುಷರಫ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಲಷ್ಕರ್ ಸಂಘಟನೆಯ ಬೆಂಬಲಿಗನಾಗಿರುವ ನಾನು ಹಫೀಜ್ ಸಯೀದ್ ನನ್ನು ಬೆಂಬಲಿಸುತ್ತೇನೆ. ಅವರನ್ನು ಹಲವು ಸಲ ಭೇಟಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಲಷ್ಕರ್ ಸಂಘಟನೆ ಸಕ್ರಿಯವಾಗಿದೆ. ನಾನು ಯಾವಾಗಲೂ ಅವರ ಪರವಾಗಿ ಇರುತ್ತೇನೆ. ಮುಂಬೈ ದಾಳಿಯ ವಿಚಾರದಲ್ಲಿ ಭಾರತ ಅಮೆರಿಕದೊಂದಿಗೆ ಸೇರಿ ಸಯೀದ್ ರನ್ನು ಭಯೋತ್ಪಾದಕನೆಂದು ಘೋಷಿಸಿದೆ ಎಂದು ಹೇಳಿದ್ದಾರೆ.

ಗೃಹಬಂಧನದಲ್ಲಿದ್ದ ಹಫೀಜ್ ಸಯೀದ್ ನನ್ನು ಬಿಡುಗಡೆ ಮಾಡಲಾಗಿದ್ದು, ಇದಕ್ಕೆ ಭಾರತ ಮತ್ತು ಅಮೆರಿಕದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಮುಷರಫ್ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...