alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದ ಮತ್ತಿನಲ್ಲಿ ಮಾಡಿದ ಕೃತ್ಯಕ್ಕೆ ಪಶ್ಚಾತಾಪ ಪಟ್ಟ ಯುವತಿ

dr-anjali-story,-fb_647_012816014916

ಭಾರತೀಯ ಮೂಲದ ವೈದ್ಯೆ ಕುಡಿದ ಮತ್ತಿನಲ್ಲಿ ಅಮೆರಿಕಾದ ಮಿಯಾಮಿಯಲ್ಲಿ ಯೂಬರ್ ಟ್ಯಾಕ್ಸಿ ಚಾಲಕನೊಂದಿಗೆ ಮಾಡಿದ ಆವಾಂತರದ ವಿಡಿಯೋವನ್ನು ವೀಕ್ಷಿಸಿದ್ದೀರಿ. ಇದೀಗ ವೈದ್ಯೆ ಅಂಜಲಿ ತಾವು ಅಂದು ಮಾಡಿದ ಕೃತ್ಯಕ್ಕೆ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ.

ಅದು ತಮ್ಮ ಜೀವನದ ಅತ್ಯಂತ ಕೆಟ್ಟ ದಿನ ಎಂದು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿರುವ ಅವರು, ಕೆಲ ಖಾಸಗಿ ಕಾರಣಗಳಿಗಾಗಿ ದುಃಖಿತಳಾಗಿದ್ದ ತಾನು ಮದ್ಯಪಾನ ಮಾಡಿದ್ದು, ನನ್ನ ಕಾರಿನಲ್ಲಿ ಮನೆಗೆ ಹೋಗಲು ಸಾಧ್ಯವಾಗದ ಕಾರಣ ಯೂಬರ್ ಟ್ಯಾಕ್ಸಿಯಲ್ಲಿ ಹೋಗಲು ಮುಂದಾಗಿದ್ದೆ ಎಂದಿದ್ದಾರೆ.

ಆದರೆ ಆ ಟ್ಯಾಕ್ಸಿಯನ್ನು ಈಗಾಗಲೇ ಬೇರೆಯವರು ಬುಕ್ ಮಾಡಿರುವ ವಿಷಯ ನನ್ನ ಗಮನಕ್ಕೆ ಬರಲಿಲ್ಲ. ತಮಗೆ ಡ್ರಾಪ್ ನೀಡಲು ಚಾಲಕ ನಿರಾಕರಿಸಿದ ಕಾರಣ ಆಕ್ರೋಶಗೊಂಡೆ ಎಂದು ಹೇಳಿದ್ದಾರೆ. ಅದೇನೆ ಇರಲಿ ಅಂದು ನಾನು ಮಾಡಿದ್ದು ದೊಡ್ಡ ತಪ್ಪು. ಇದಕ್ಕಾಗಿ ನಾನು ಎಲ್ಲರ ಕ್ಷಮೆ ಕೇಳುತ್ತೇನೆ ಎಂದಿರುವ ಅಂಜಲಿ, ಚಾಲಕನ ಮೇಲೆ ಹಲ್ಲೆ ಮಾಡಿದ ಬಳಿಕವೂ ಆತ ತಮ್ಮ ವಿರುದ್ದ ದೂರು ದಾಖಲಿಸದಿರುವುದಕ್ಕೆ ಅಭಾರಿಯಾಗಿದ್ದೇನೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...