alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಮೊಬೈಲ್ ನಲ್ಲಿ ಈ ಆಪ್ ಇದ್ದರೆ ಕೂಡಲೇ ರಿಮೂವ್ ಮಾಡಿ

warning-signಅಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಫೋನ್ ಬಳಸುತ್ತಿರುವವರಿಗೆ ಮೊಬೈಲ್ ಸೆಕ್ಯುರಿಟಿ ಕಂಪನಿ Zimperium ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ AirDroid ಆಪ್, ಡೌನ್ ಲೋಡ್ ಮಾಡಿಕೊಂಡಿದ್ದರೆ ಸುರಕ್ಷತೆಯ ದೃಷ್ಟಿಯಿಂದ ಅದನ್ನು ಕೂಡಲೇ ರಿಮೂವ್ ಮಾಡಿ ಎಂಬ ಸಲಹೆ ನೀಡಿದೆ.

ಚೀನಾದ  San Studio ಕಂಪನಿ ಈ ಆಪ್ ನ್ನು ಅಭಿವೃದ್ದಿಪಡಿಸಿದ್ದು, AirDroid ಡೌನ್ ಲೋಡ್ ಮಾಡಿಕೊಂಡಿದ್ದ ಗ್ರಾಹಕರು ಪಿಸಿ ಮೂಲಕ ಅಂಡ್ರಾಯ್ಡ್ ಉಪಕರಣಗಳನ್ನು ನಿಯಂತ್ರಿಸಬಹುದಿತ್ತು. ಅಲ್ಲದೇ ಬ್ಯಾಕ್ ಅಪ್ ಹಾಗೂ ವಿಡಿಯೋ, ಫೋಟೋಗಳನ್ನು ಸಿಂಕ್ರೋನೈಜ್ ಮಾಡುವ ಸೌಲಭ್ಯವೂ ಇತ್ತು.

ಆದರೆ ಹ್ಯಾಕರ್ ಗಳು ಇದನ್ನು ಸುಲಭವಾಗಿ ಹ್ಯಾಕ್ ಮಾಡುವ ಮೂಲಕ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿರುವ ಅಮೂಲ್ಯ ಮಾಹಿತಿಗಳಿಗೆ ಕನ್ನ ಹಾಕಬಹುದೆಂದು Zimperium ಎಚ್ಚರಿಸಿದೆ. ಹೀಗಾಗಿ ಸುರಕ್ಷತಾ ಕ್ರಮಗಳನ್ನು ಈ ಆಪ್ ನಲ್ಲಿ ಕೈಗೊಳ್ಳುವವರೆಗೂ ಇದನ್ನು ರಿಮೂವ್ ಮಾಡುವುದು ಸೂಕ್ತ ಎಂದು Zimperium ಹೇಳಿದೆ. ಸುಮಾರು 10 ಮಿಲಿಯನ್ ಮಂದಿ AirDroid ಆಪ್ ಡೌನ್ ಲೋಡ್ ಮಾಡಿಕೊಂಡಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...