alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಗೆ ಎಚ್ಚರಿಕೆ ನೀಡಿದ ಉಗ್ರ ಮಸೂದ್ ಅಜರ್

azhar-large

ಬಲವಂತವಾಗಿ ಉಗ್ರಗಾಮಿ ಸಂಘಟನೆಗಳನ್ನು ಮಟ್ಟ ಹಾಕಲು ಮುಂದಾದರೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಸ್ಥಾಪಕ ಮಸೂದ್ ಅಜರ್ ಪಾಕ್ ಸರ್ಕಾರದ ವಿರುದ್ದ ಗುಡುಗಿದ್ದಾನೆ.

ಹೌದು. ಪಾಕ್ ಸರ್ಕಾರದ ವಿರುದ್ದ ಕಿಡಿ ಕಾರಿರುವ ಮಸೂದ್, ನನ್ನ ಪಡೆ ಸಾವನ್ನು ಪ್ರೀತಿಸುವಂತೆ ತಯಾರಿಸಿದ್ದು, ಒಂದೊಮ್ಮೆ ಸರ್ಕಾರ, ಜಿಹಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದ್ದಾನೆ.

ಅಷ್ಟೇ ಅಲ್ಲ, ನನ್ನ ಸೆರೆ ಹಿಡಿಯಲು ಮುಂದಾದವರಿಗೆ ನನ್ನ ಪಡೆ, ಶತ್ರುಗಳಿಗೆ ಸಂಭ್ರಮಿಸಲು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದಿರುವ ಮಸೂದ್, ನನ್ನ ಪಡೆ ಸಾವನ್ನು ಪ್ರೀತಿಸುತ್ತದೆ. ಹಾಗಾಗಿ ಪಾಕ್ ಸರ್ಕಾರ ಮಸೀದಿ, ಜಿಹಾದಿ ವಿರುದ್ಧ ಕಾರ್ಯಾಚರಣೆಗೆ ಇಳಿದರೆ ದೇಶದ ಭದ್ರತೆಗೆ ಅಪಾಯ ಎದುರಾಗುತ್ತದೆ ಎಂಬ ಸಂದೇಶ ರವಾನಿಸಿದ್ದಾನೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...