alex Certify
ಕನ್ನಡ ದುನಿಯಾ       Mobile App
       

Kannada Duniya

ಶತಮಾನದ ಈ ನಾಲ್ವರು ಮೂರ್ಖರು ಮಾಡಿದ್ದೇನು ಗೊತ್ತಾ?

ಆಸ್ಟ್ರೇಲಿಯಾದಲ್ಲಿ ನಾಲ್ವರು ಪುರುಷರು ಮೊಸಳೆಗಳಿರುವ ನದಿಯಲ್ಲಿ ಈಜಲು ತೆರಳಿದ್ದ ಫೋಟೋ ವೈರಲ್ ಆಗಿದೆ. ಅವರನ್ನು ಶತಮಾನದ ಮೂರ್ಖರು ಅಂತಾ ಜಾಲತಾಣಗಳಲ್ಲಿ ಕರೆಯಲಾಗ್ತಿದೆ. ಕ್ವೀನ್ಸ್ ಲ್ಯಾಂಡ್ ನಲ್ಲಿರೋ ಪೋರ್ಟ್ ಡೌಗ್ಲಸ್ ಗೆ ಇವರು ತೆರಳಿದ್ರು.

ಇದೇ ಜಾಗದಲ್ಲಿ ಇತ್ತೀಚೆಗಷ್ಟೆ ಅನ್ನೆ ಕೆಮರೊನ್ ಎಂಬ ಮಹಿಳೆಯನ್ನು ದೈತ್ಯ ಮೊಸಳೆಯೊಂದು ತಿಂದು ಹಾಕಿತ್ತು. ಈ ನದಿಯಲ್ಲಿ ಇಂತಹ ಹಲವು ಕ್ರೂರ ಮೊಸಳೆಗಳಿವೆ. ಅದು ಗೊತ್ತಿದ್ರೂ ಅಲ್ಲೇ ಈಜಲು ಹೋಗಿದ್ದ ನಾಲ್ವರ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ.

ಈ ಬಗ್ಗೆ ಡೌಗ್ಲಸ್ ಮೇಯರ್ ಕೂಡ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ನಾಲ್ವರಿಗೂ ಶತಮಾನದ ಮೂರ್ಖರೆಂಬ ಪ್ರಶಸ್ತಿ ನೀಡಬೇಕೆಂದು ಕಿಡಿಕಾರಿದ್ದಾರೆ. ಮೊಸಳೆಗಳನ್ನು ಹಿಡಿಯಲು ಹಾಕಿದ್ದ ಬಲೆಯಲ್ಲಿ ನಿಂತು ನಾಲ್ವರು ಫೋಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...