alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿನ್ಸ್ ಸಹೋದರರಿಗೆ ಸಿಕ್ಕರು ಟ್ವಿನ್ಸ್ ಸಹೋದರಿಯರು…!

ಅವಳಿ-ಜವಳಿ ನೋಡೋದೇ ಚೆಂದ. ಅವಳಿ-ಜವಳಿ ಸಾಮಾನ್ಯವಾಗಿ ಬೇರೆಯಾಗಲು ಇಷ್ಟಪಡುವುದಿಲ್ಲ. ಸದಾ ಒಟ್ಟಿಗೆ ಇರಬೇಕೆಂದು ಬಯಸ್ತಾರೆ. ಆದ್ರೆ ಅವಳಿ ಹೆಣ್ಣು ಮಕ್ಕಳಿಗೆ ಅವಳಿ ಗಂಡು ಮಕ್ಕಳನ್ನೇ ಮದುವೆಯಾಗುವ ಅದೃಷ್ಟ ಸಿಗೋದು ಕಷ್ಟ. ಆದ್ರೆ ಈ ಸೋದರಿಯರಿಗೆ ಆ ಅದೃಷ್ಟ ಒಲಿದಿದೆ.

ಅವಳಿ ಸಹೋದರರು, ಅವಳಿ ಸಹೋದರಿಯರಿಗೆ ಪ್ರಪೋಸ್ ಮಾಡಿದ್ದು, ಇಬ್ಬರು ಒಟ್ಟಿಗೆ ಮದುವೆಯಾಗುವ ಪ್ಲಾನ್ ಮಾಡಿದ್ದಾರೆ. ಬ್ರಿಟಾನಿ ಹಾಗೂ ಬ್ರಿಯಾನಾ ಡಯಾನಾ, ಜೋಶ್ ಮತ್ತು ಜೆರೆಮಿ ಸಾಲೇರ್ಸ್ರನ್ನು ಆಗಸ್ಟ್ ನಲ್ಲಿ ನಡೆದ ಟ್ವಿನ್ಸ್ ಡೇ ಹಬ್ಬದಲ್ಲಿ ಭೇಟಿಯಾಗಿದ್ದರು. ಓಹಿಯೋದ ಟ್ವಿನ್ಸ್ಬರ್ಗ್ ನಲ್ಲಿ ಈ ಹಬ್ಬ ನಡೆದಿತ್ತು.

2011ರಿಂದಲೇ ಈ ಹಬ್ಬಕ್ಕೆ ಡಯಾನಾ ಸಹೋದರಿಯರು ಬರ್ತಿದ್ದರು. ಆದ್ರೆ ಇದೇ ಮೊದಲ ಬಾರಿ ಈ ಹಬ್ಬದಲ್ಲಿ ಪಾಲ್ಗೊಂಡಿದ್ದ ಸಾಲೇರ್ಸ್ ಸಹೋದರರಿಗೆ ಡಯಾನಾ ಸಹೋದರಿಯರು ಮೊದಲ ದಿನ ಕಾಣಿಸಿದ್ದಾರೆ. ಕೊನೆ ದಿನ ಪರಿಚಯವಾಗಿದೆ. ನಂತ್ರ ಫೇಸ್ಬುಕ್ ನಲ್ಲಿ ಮಾತುಕತೆ ನಡೆದಿದೆ.

ನಾಲ್ವರೂ ಟ್ರಿಪ್ ಪ್ಲಾನ್ ಮಾಡಿ ಒಂದೆಡೆ ಸೇರಿದ್ದಾರೆ. ಅಲ್ಲಿ ಸಾಲೇರ್ಸ್ ಸಹೋದರರು ಡಯಾನಾ ಸಹೋದರಿಯರಿಗೆ ಪ್ರೇಮ ನಿವೇದನೆ ಮಾಡಿದ್ದಾರೆ. 2018ರಲ್ಲಿ ಮತ್ತೆ ನಡೆಯುವ ಟ್ವಿನ್ಸ್ ಡೇ ಹಬ್ಬದಲ್ಲಿ ಒಟ್ಟಿಗೆ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...