alex Certify
ಕನ್ನಡ ದುನಿಯಾ       Mobile App
       

Kannada Duniya

ಉಲ್ಟಾ ಹೊಡೆದ ಪಾಕ್ ನಟಿ

saba

ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಹೃತಿಕ್ ರೋಶನ್, ರಿತೇಶ್ ದೇಶ್ಮುಖ್ ಹಾಗೂ ಇಮ್ರಾನ್ ಹಷ್ಮಿಗೆ ಅವಮಾನ ಮಾಡಿದ್ದ ಪಾಕಿಸ್ತಾನದ ನಟಿ ಸಬಾ ಕಮರ್ ಈಗ ಉಲ್ಟಾ ಹೊಡೆದಿದ್ದಾಳೆ. ‘ಗುಡ್ ಮಾರ್ನಿಂಗ್ ಜಿಂದಗಿ’ ಒಂದು ಕಾಮಿಡಿ ಶೋ. ನಾನು ಹೇಳಿದ್ದೆಲ್ಲ ಕೇವಲ ತಮಾಷೆಗೆ, ಭಾರತೀಯ ಚಿತ್ರರಂಗ ಅಂದ್ರೆ ನನಗಿಷ್ಟ, ಅದ್ರಲ್ಲೂ ಐ ಲವ್ ಸಲ್ಮಾನ್ ಖಾನ್ ಎಂದಿದ್ದಾಳೆ.

ಸಲ್ಲು ಒಬ್ಬ ದೊಡ್ಡ ಸ್ಟಾರ್, ತುಂಬಾ ವಿನಮ್ರ ಸ್ವಭಾವದವರು ಎನ್ನುವ ಮೂಲಕ  ತೇಪೆ ಹಚ್ಚೋ ಕೆಲಸ ಮಾಡಿದ್ದಾಳೆ. ಪಾಕಿಸ್ತಾನದ ಟಿವಿ ಶೋವೊಂದರಲ್ಲಿ ಪಾಲ್ಗೊಂಡಿದ್ದ ಸಬಾ ಕಮರ್, ಬಾಲಿವುಡ್ ಸ್ಟಾರ್ಸ್ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ಲು.

ಸಲ್ಮಾನ್ ಚೆಲ್ಲಾಟದ ಹುಡುಗ, ಅವರಿಗೆ ಡಾನ್ಸ್ ಮಾಡೋಕೆ ಬರೋದಿಲ್ಲ. ಹಾಗಾಗಿ ನಾನು  ಸಲ್ಲು ಜೊತೆ ನಟಿಸೊಲ್ಲ ಎಂದಿದ್ಲು. ಇಮ್ರಾನ್ ಹಶ್ಮಿ ಜೊತೆ ನಟಿಸಿದ್ರೆ ಬಾಯಿ ಕ್ಯಾನ್ಸರ್ ಬರುತ್ತೆ ಎಂದ ಸಬಾ,  ಹೃತಿಕ್ ರೋಷನ್ ಹಾಗೂ ರಿತೇಶ್ ದೇಶ್ಮುಖ್ ಬಗ್ಗೆಯೂ ಹಗುರವಾಗಿ ಮಾತನಾಡಿದ್ದಾಳೆ. ಪಾಕ್ ನಟಿಯ ಈ ವಿಡಿಯೋ ವೈರಲ್ ಆಗಿದ್ದು, ಸಲ್ಮಾನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಸಬಾ ವ್ಯತಿರಿಕ್ತ ಹೇಳಿಕೆ ನೀಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...