alex Certify
ಕನ್ನಡ ದುನಿಯಾ       Mobile App
       

Kannada Duniya

ಜನವರಿ 2 ನ್ನು ‘ಡೈವೋರ್ಸ್ ದಿನ’ ವೆಂದು ಏಕೆ ಹೇಳಲಾಗುತ್ತೆ ಗೊತ್ತಾ..?

297826-couple-rna

ಪ್ರತಿ ವರ್ಷದ ಜನವರಿ 2 ರ ದಿನಾಂಕವನ್ನು ‘ಡೈವೋರ್ಸ್ ದಿನ’ ವೆಂದು ಹೇಳಲಾಗಿದೆ. ಈ ದಿನದಂದು ತಮ್ಮ ಸಂಗಾತಿಯಿಂದ ವಿಚ್ಚೇದನ ಕೋರಿ ನ್ಯಾಯಾಲಯದ ಮೊರೆ ಹೋಗುವವರ ಸಂಖ್ಯೆಯನ್ನಾಧರಿಸಿ ಈ ತೀರ್ಮಾನಕ್ಕೆ ಬರಲಾಗಿದೆ.

ಜನವರಿ 2 ರಂದೇ ಪಾಶ್ಚಾತ್ಯ ರಾಷ್ಟ್ರಗಳ ಬಹುತೇಕ ದಂಪತಿಗಳು ವಿಚ್ಚೇದನ ಪಡೆಯಲು ಮುಂದಾಗುತ್ತಿದ್ದು, ಈ ಕುರಿತು ಅಧ್ಯಯನ ನಡೆಸಿರುವ ತಜ್ಞರ ಪ್ರಕಾರ ದಂಪತಿಗಳು ಕ್ರಿಸ್ ಮಸ್ ಸಂದರ್ಭದಲ್ಲಿ ಈ ನಿರ್ಧಾರಕ್ಕೆ ಬರುತ್ತಾರೆ ಹಾಗೂ ಈ ಕುರಿತು ತಮ್ಮ ಅತ್ಮೀಯರ ಬಳಿ ಸಲಹೆಯನ್ನೂ ಪಡೆಯುವ ಇವರುಗಳು ಅಂತಿಮವಾಗಿ ಜನವರಿ 2 ಕ್ಕೆ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸುತ್ತಾರೆ ಎಂದಿದ್ದಾರೆ.

ಕುಟುಂಬದಲ್ಲಿ ಸಾಮರಸ್ಯ ಇಲ್ಲದಿರುವುದು, ಪತಿ ಅಥವಾ ಪತ್ನಿಯ ಸಾಮಾಜಿಕ ವರ್ತನೆ ಇವುಗಳೆಲ್ಲವೂ ವಿಚ್ಚೇದನಕ್ಕೆ ಕಾರಣವಾಗುವುದನ್ನೂ ತಜ್ಞರು ಸಮೀಕ್ಷೆಯಲ್ಲಿ ಕಂಡುಕೊಂಡಿದ್ದಾರೆ. ಮತ್ತೊಂದು ಆಶ್ಚರ್ಯಕರ ಸಂಗತಿ ಹೊರ ಬಿದ್ದಿರುವುದೇನೆಂದರೆ ಸಾಮಾಜಿಕ ಜಾಲ ತಾಣಗಳಲ್ಲಿ ಬಹಳಷ್ಟು ಮಂದಿ ತಮ್ಮ ಪತಿ ಅಥವಾ ಪತ್ನಿಯನ್ನು ಹೊರತುಪಡಿಸಿದ ಹೊಸ ಸಂಬಂಧಕ್ಕೆ ಹಾತೊರೆದಿರುವುದೂ ಕಂಡು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...