alex Certify
ಕನ್ನಡ ದುನಿಯಾ       Mobile App
       

Kannada Duniya

ಸತ್ತ ಪತಿಯ ವೀರ್ಯ ಸಂಗ್ರಹಿಸಿಟ್ಟ ಪತ್ನಿ

Understanding

ಪ್ರೀತಿ ಅಮರವಾದದ್ದು. ಒಮ್ಮೆ ನಿಜವಾದ ಪ್ರೀತಿ ಹುಟ್ಟಿದರೆ ಸಮಾಜದ ಮಾತುಗಳು ಅವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರೀತಿ ಉಳಿಸಿಕೊಳ್ಳಲು ಪ್ರೇಮಿಗಳು ಏನು ಬೇಕಾದ್ರೂ ಮಾಡ್ತಾರೆ. ಇದಕ್ಕೆ ಅಮೆರಿಕಾದಲ್ಲಿ ನಡೆದ ಘಟನೆ ಉತ್ತಮ ನಿದರ್ಶನ.

ಅಮೆರಿಕಾದ ಏನಾ ಎಂಬಾಕೆ ತನ್ನ ಪತಿ ಸತ್ತ ನಂತರವೂ ಆತನ ಮಗುವಿಗೆ ತಾಯಿಯಾಗಲು ಬಯಸಿದ್ದಾಳೆ. ಹಾಗಾಗಿಯೇ ಆತನ ವೀರ್ಯವನ್ನು ಕಾಯ್ದಿಟ್ಟುಕೊಂಡಿದ್ದಾಳಂತೆ. ಈ ವಿಷಯವನ್ನು ಆಕೆ ಹೇಳಿದ್ದಾಳೆ. 25 ವರ್ಷದ ಮೈಕಲ್ ಎಂಬಾತನ ಜೊತೆ ಏನಾ ಮದುವೆಯಾಗಿದ್ದಳು. ಮದುವೆಯಾಗಿ ಒಂದು ವರ್ಷವಾಗಿತ್ತು. ಬೈಕ್ ನಲ್ಲಿ ಹೋಗುತ್ತಿರುವಾಗ ಅಪಘಾತ ಸಂಭವಿಸಿ ಮೈಕಲ್ ಸಾವನ್ನಪ್ಪಿದ್ದ. ಏನಾ ಬದುಕಿದ್ದಳು.

ಮೈಕಲ್ ನನ್ನು ತುಂಬಾ ಪ್ರೀತಿ ಮಾಡುವ ಏನಾ, ಆತನ ಮಗುವಿಗೆ ತಾಯಿಯಾಗಲು ಬಯಸಿದ್ದಾಳೆ. ಹಾಗಾಗಿಯೇ ವೀರ್ಯವನ್ನು ಕಾಯ್ದಿರಿಸಿದ್ದಾಳೆ. ಎರಡನೇ ಮದುವೆಯಾದ್ರೂ ತನ್ನ ಮೊದಲ ಪ್ರೀತಿ ಮೈಕಲ್. ಹಾಗಾಗಿ ಆತನ ಮಗುವಿಗೆ ನಾನು ತಾಯಿಯಾಗ್ತೇನೆ. ಇದನ್ನು ನನ್ನ ಬಾಳಲ್ಲಿ ಬರುವ ಇನ್ನೊಬ್ಬ ಪುರುಷನಿಗೆ ಹೇಳಿಯೇ ಮದುವೆಯಾಗ್ತೇನೆ ಎನ್ನುತ್ತಾಳೆ ಏನಾ.

ವೀರ್ಯ ಸಂಗ್ರಹ ಈಗಿನದಲ್ಲ. ಸುಮಾರು 40 ವರ್ಷಗಳಿಂದಲೂ ಜಾರಿಯಲ್ಲಿದೆ. ಸಾವನ್ನಪ್ಪಿದ 24-36 ಗಂಟೆಯೊಳಗೆ ವೀರ್ಯವನ್ನು ಸಂಗ್ರಹಿಸಿಡಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...