alex Certify
ಕನ್ನಡ ದುನಿಯಾ       Mobile App
       

Kannada Duniya

6 ದಿನ ಪತ್ನಿ ಶವದ ಜೊತೆಯಲ್ಲೇ ಇದ್ದ ಪತಿ, ಕಾರಣ ಕೇಳಿದ್ರೆ….

wendy-davison-650_650x400_61494350990

ಲಂಡನ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶವದ ಜೊತೆಗೆ 6 ದಿನಗಳನ್ನು ಕಳೆದಿದ್ದಾನೆ. ಪತ್ನಿಯ ಮೃತದೇಹವನ್ನು ಇಟ್ಟಿದ್ದ ಕೋಣೆಯಲ್ಲೇ ಆತ ಮಲಗುತ್ತಿದ್ದ. ರಸೆಲ್ ಡೇವಿಸನ್ ಹೀಗೆ ಮಾಡೋದಕ್ಕೆ ಕಾರಣವೂ ಇದೆ. ರಸೆಲ್ ಡೇವಿಸನ್ ಪತ್ನಿ 50 ವರ್ಷದ ವೆಂಡಿ ಡೇವಿಸನ್ ಕ್ಯಾನ್ಸರ್ ನಿಂದಾಗಿ ಮೃತಪಟ್ಟಿದ್ಲು. ಪತ್ನಿ ಸಾವಿನಿಂದ ರಸೆಲ್ ತೀವ್ರ ನೊಂದಿದ್ದ. ಅವಳ ಮೃತದೇಹವನ್ನು ಸ್ಮಶಾನದಲ್ಲಿಡುವುದು ಆತನಿಗೆ ಇಷ್ಟವಿರಲಿಲ್ಲ.

ಜೊತೆಗೆ ಸಾವಿನ ಬಗ್ಗೆ ಜನರಲ್ಲಿರುವ ಭಯವನ್ನು ಹೋಗಲಾಡಿಸುವುದು ಆತನ ಉದ್ದೇಶವಾಗಿತ್ತು. ಪತ್ನಿಯ ಶವವನ್ನು ಮನೆಯಲ್ಲೇ ಇಟ್ಟುಕೊಳ್ಳಲು ಕಾನೂನಿನ ಅನುಮತಿಯನ್ನೂ ರಸೆಲ್ ಪಡೆದುಕೊಂಡಿದ್ದ. 2006ರಲ್ಲಿ ವೆಂಡಿಯ 40ನೇ ಹುಟ್ಟುಹಬ್ಬದ ದಿನವೇ ಆಕೆಗೆ ಕ್ಯಾನ್ಸರ್ ಇದೆ ಅನ್ನೋದು ಗೊತ್ತಾಗಿತ್ತು. ವೈದ್ಯರಿಂದ ಚಿಕಿತ್ಸೆ ಮಾಡಿಸಿದ್ರೆ ವೆಂಡಿ ದೀರ್ಘಕಾಲ ಬದುಕೋದು ಅಸಾಧ್ಯ ಅನ್ನೋದು ರಸೆಲ್ ವಾದ.

ಹಾಗಾಗಿ ಆತ ಪತ್ನಿಗೆ ಕಿಮೋಥೆರಪಿ, ರೇಡಿಯೋಥೆರಪಿ ಸೇರಿದಂತೆ ಯಾವುದೇ ಚಿಕಿತ್ಸೆಯನ್ನೂ ಕೊಡಿಸಿರಲಿಲ್ಲ. 2014ರಲ್ಲಿ ಆಕೆ ಇನ್ನು ಬದುಕೋದು ಕೇವಲ 6 ತಿಂಗಳು ಮಾತ್ರ ಅಂತಾ ವೈದ್ಯರು ಹೇಳಿಬಿಟ್ಟಿದ್ರು. ಆಗ ದಂಪತಿ ಜೊತೆಯಾಗಿ ಯುರೋಪ್ ಪ್ರವಾಸ ಹೊರಟಿದ್ರು. ಸೆಪ್ಟೆಂಬರ್ ನಲ್ಲಿ ವೆಂಡಿಯ ಆರೋಗ್ಯ ಹದಗೆಟ್ಟಿದ್ರಿಂದ ಪ್ರವಾಸ ಮೊಟಕುಗೊಳಿಸಿ ವಾಪಸ್ಸಾಗಬೇಕಾಯ್ತು.

ತಾನು ಆಸ್ಪತ್ರೆಯಲ್ಲಿ ಸಾಯಬಾರದು ಅನ್ನೋದೇ ವೆಂಡಿಯ ಆಸೆಯಾಗಿತ್ತು. ಹಾಗಾಗಿ ಮನೆಯಲ್ಲೇ ರಸೆಲ್ ಆಕೆಗೆ ಚಿಕಿತ್ಸೆ ಕೊಡಿಸಿದ್ದ. ಏಪ್ರಿಲ್ 26ರಂದು ವೆಂಡಿ ಮೃತಪಟ್ಟಿದ್ದು, ಅಂತಿಮ ಸಂಸ್ಕಾರ ಮಾಡುವವರೆಗೂ ಶವವನ್ನು ಆತ ಮನೆಯಲ್ಲೇ ಇಟ್ಟುಕೊಂಡಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...