alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಅನೈತಿಕ ಸಂಬಂಧ ಈತನಿಗೆ ತಿಳಿದಿದ್ದೇಗೆ ಗೊತ್ತಾ?

ಇತ್ತೀಚಿನ ತಂತ್ರಜ್ಞಾನ ಯುಗದಲ್ಲಿ ಯಾವುದನ್ನು ಮುಚ್ಚಿಡುವುದು‌‌ ಸುಲಭವಲ್ಲ. ಆದೇ ತಂತ್ರಜ್ಞಾನ ಇದೀಗ ಮಹಿಳೆಯೊಬ್ಬಳಿಗೆ ಕಂಟಕವಾಗಿದ್ದು, ಮದುವೆ ಮುರಿದುಬಿದ್ದಿದೆ.

ಹೌದು, ಪೆರು ದೇಶದಲ್ಲಿ ಈ‌ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಲೀಮಾ ನಗರದಲ್ಲಿ ತನ್ನ ಪ್ರೇಮಿಯೊಂದಿಗೆ ಸುಖವಾಗಿ ವರ್ಷಗಳ ಹಿಂದೆ ಸಮಯ ಕಳೆಯುತ್ತಿದ್ದ ಫೋಟೊಗಳು ಯುವತಿಯ ಪತಿಗೆ ಗೂಗಲ್ ಸ್ಟ್ರೀಟ್ ಮೂಲಕ‌ ಸಿಕ್ಕಿದ್ದು, ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ತಿಳಿದು ಸಂಬಂಧ ಮುರಿದುಕೊಂಡಿದ್ದಾನೆ.

2013 ರಲ್ಲಿ ಪ್ರಿಯಕರನೊಂದಿಗೆ ಪಾರ್ಕ್ ನ ರಸ್ತೆಯಲ್ಲಿದ್ದ ಬೆಂಚ್ ಒಂದರಲ್ಲಿ ಸಮಯ ಕಳೆದಿದ್ದಾಳೆ. ಅದೇ ಸ್ಥಳದಲ್ಲಿ ಪತಿಯೂ ಇತ್ತೀಚಿಗೆ ಹೋಗಬೇಕು ಎಂದಾಗ, ಈ ದಾರಿಯಲ್ಲಿ ಹೋಗಲು ಸೂಕ್ತ ಮಾರ್ಗವನ್ನು ಹುಡುಕಿದ್ದಾನೆ. ಈ ವೇಳೆ ತನ್ನ ಪತ್ನಿ ಆಕೆಯ ಪ್ರೇಮಿಯೊಂದಿಗೆ ವರ್ಷಗಳ ಹಿಂದೆ ಅಲ್ಲಿದ್ದ ಸಂಗತಿ ತಿಳಿದುಬಂದಿದೆ. ಅನೈತಿಕ ಸಂಬಂಧದ ಬಗ್ಗೆ ಗೊತ್ತಾಗುತ್ತಿದ್ದಂತೆ ಇದೀಗ ಪತಿ, ಪತ್ನಿಯಿಂದ ದೂರಾಗಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಫೋಟೋ ನೋಡುತ್ತಿದ್ದಂತೆ ಈ ವಿಚಾರವಾಗಿ ಪತ್ನಿಯನ್ನು ವಿಚಾರಿಸಿದೆ. ಆ ವೇಳೆ, ತನಗಿದ್ದ ಸಂಬಂಧದ ಬಗ್ಗೆ ಒಪ್ಪಿಕೊಂಡಳು. ಆದ್ದರಿಂದ ಆಕೆಯನ್ನು ದೂರ ಮಾಡಿದ್ದೇನೆ ಎಂದು ಪತಿ ಹೇಳಿದ್ದಾನೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ಅನೇಕರು “ಈ ಜಗತ್ತು ಚಿಕ್ಕದು” ಎಂದು ಅಭಿಪ್ರಾಯಪಟ್ಟು, ಪತಿಯನ್ನು ಸಂತೈಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...