alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳನ ಪಾಲಾಯ್ತು ಸುಂದರವಾದ ಸೆಕ್ಸ್ ಡಾಲ್…!

ವಯಸ್ಕರ ಮಳಿಗೆಯೊಂದರಿಂದ ಸುಂದರವಾದ ಸೆಕ್ಸ್ ಡಾಲ್ ಕದ್ದೊಯ್ದಿರೋ ಕಳ್ಳನಿಗಾಗಿ ಆಸ್ಟ್ರೇಲಿಯಾ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮೂರ್ಬಿನ್ ನಲ್ಲಿರೋ ಸೆಕ್ಸಿ ಲ್ಯಾಂಡ್ ಹೆಸರಿನ ಮಳಿಗೆಯಲ್ಲಿ ಕಳ್ಳತನ ನಡೆದಿದೆ. ಬೆಳಗ್ಗೆ 6 ಗಂಟೆಗೆ ಮುಸುಕುಧಾರಿಯೊಬ್ಬ ಬಿಳಿ ಬಣ್ಣದ ಫೋರ್ಡ್ ಟ್ರಾನ್ಸಿಟ್ ವ್ಯಾನ್ ನಲ್ಲಿ ಬಂದಿದ್ದ.

ಬೋಲ್ಟ್ ಕಟ್ಟರ್ ಗಳನ್ನು ಬಳಸಿ ಮಳಿಗೆ ಪ್ರವೇಶಿಸಿದ್ದಾನೆ. ಅಲ್ಲಿದ್ದ ಡೊರಥಿ ಎಂಬ ಸೆಕ್ಸ್ ಡಾಲ್ ಅನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಮನುಷ್ಯರಷ್ಟೇ ದೊಡ್ಡ ಆಕೃತಿ ಹೊಂದಿರುವ ಈ ಡಾಲ್ ಬೆಲೆ 2,500 ಪೌಂಡ್. ಸೆಕ್ಸ್ ಡಾಲ್ ಕಳವಿನ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ.

ಕಳ್ಳ ಮುಖವನ್ನು ಪೂರ್ತಿಯಾಗಿ ಮುಚ್ಚಿಕೊಂಡಿದ್ದರಿಂದ ಚಹರೆ ಗೊತ್ತಾಗುತ್ತಿಲ್ಲ. ಸೆಕ್ಸ್ ಡಾಲ್ ಹಾಗೂ ಸಿಸಿ ಟಿವಿ ವಿಡಿಯೋವನ್ನು ಪೊಲೀಸರು ರಿಲೀಸ್ ಮಾಡಿದ್ದಾರೆ. ಕಳ್ಳನ ಸುಳಿವು ಸಿಕ್ಕಲ್ಲಿ ಕೂಡಲೇ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...