alex Certify
ಕನ್ನಡ ದುನಿಯಾ       Mobile App
       

Kannada Duniya

ಹಸಿದ ಕರಡಿ ಮಾಡಿದ್ದಾದರೂ ಏನು…?

ಹಸಿವಾದರೆ ತಲೆ ಓಡುವುದಿಲ್ಲ ಎನ್ನುವುದು ಮನುಷ್ಯರ ಸಮಸ್ಯೆ. ಆದರೆ ಇಲ್ಲಿರುವ ಕರಡಿಗೆ, ಹಸಿವಾಗಿದ್ದಕ್ಕೆ ಅಚ್ಚರಿಯ ರೀತಿಯಲ್ಲಿ ತಲೆ ಓಡಿಸಿ ಈಗ ಸಾಮಾಜಿಕ ಜಾಲತಾಣದಲ್ಲಿ‌ ಕೇಂದ್ರ ಬಿಂದುವಾಗಿದೆ.

ಯುನೈಟೆಡ್ ಕಿಂಗ್ ಡಂ ನ ಗ್ಯಾಟ್ಲಿನ್ ಬರ್ಗ್ ಪ್ರದೇಶದಲ್ಲಿ ಹಸಿದ ಕರಡಿಯೊಂದು, ರಾಜಾರೋಷವಾಗಿ ಬಂದು ಕಾರಿನ ಬಾಗಿಲನ್ನು ಮಾಲೀಕನ ರೀತಿ ತೆರೆದು, ಕಾರಿನಲ್ಲಿದ್ದ ಆಹಾರವನ್ನು ತೆಗೆದುಕೊಂಡು ಹೋಗಿದೆ. ಕರಡಿಯ ಈ ಕೆಲಸವನ್ನು ಕಾರಿನ ಮಾಲೀಕ ಸ್ಟೀವ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದುಮಾಡಿದೆ.

ಕರಡಿಯ ಈ ಕೆಲಸವನ್ನು ಸೆ.25ರಂದು ಫೇಸ್ ಬುಕ್ ಗೆ ಸ್ಟೀವ್ ಪತ್ನಿ, ಕರೇನ್ ಸಿಮ್ಮಿಂಗ್ಟನ್ ಹೋಗಾರ್ಟ್ ಹಾಕಿದ್ದಾರೆ. ಬಳಿಕ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು ಕರಡಿ ಈ ರೀತಿ ಮಾಡಿದ 10 ನಿಮಿಷದ ಬಳಿಕ ಪತಿ ಕಾರ್ ಲಾಕ್ ಮಾಡಿದರು. ಆದರೆ ಮತ್ತೆ ಕರಡಿ ಬಂದು ಬಾಗಿಲು ತೆರೆಯಲು ಪ್ರಯತ್ನಿಸಿ ವಿಫಲವಾಗಿದೆ. ಆಹಾರ ಅರಸಿ ಕರಡಿ ಬಂದಿತ್ತು. ಆದರೆ ಕಾರಿನಲ್ಲಿ ಕೇವಲ ಕಸದ ಚೀಲ ಮಾತ್ರ ಇತ್ತು ಎಂದು ಕರೇನ್ ತಿಳಿಸಿದ್ದಾರೆ.

ಕರಡಿಯ ವಿಡಿಯೋ ಹಾಕಿದ ಕೆಲವೇ ನಿಮಿಷದಲ್ಲಿ, ಫೇಸ್ ಬುಕ್ ನಲ್ಲಿ ಸದ್ದು ಮಾಡಿದ್ದು, ಕೆಲವರು ಕರಡಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶಹಬಾಸ್‌ ಗಿರಿ ನೀಡಿದರೆ, ಇನ್ನು ಕೆಲವರು ಕಾರಿನ ಮಾಲೀಕರನ್ನು ನೆನೆದರೆ ನಗು ಬರುತ್ತದೆ ಎಂದು ಕಾಲೆಳೆದಿದ್ದಾರೆ.

Bear in Gatlinburg at my husband's job today 😍😍

Posted by Karen Simington Hogarth on Monday, September 24, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...