alex Certify
ಕನ್ನಡ ದುನಿಯಾ       Mobile App
       

Kannada Duniya

2 ದಿನ ಹೆಬ್ಬಾವಿನ ಜೊತೆ ಜಿಮ್ ನಲ್ಲಿ ಮಹಿಳೆ..!

sn

ಚಂಟಲ್ ವಾಗನ್ ಎಂಬ ಮಹಿಳೆ ಎಂದಿನಂತೆ ಜಿಮ್ ಮಾಡಲು ಬಂದಿದ್ಲು. ಮೇಲೆ ಛಾವಣಿಯಲ್ಲಿ ದೊಡ್ಡದೊಂದು ರಂಧ್ರವಾಗಿದ್ದನ್ನು ನೋಡಿ ಆಕೆಗೆ ಅಚ್ಚರಿ. ಯಾವುದೋ ಭಾರವಾದ ವಸ್ತು ಬಿದ್ದು ರಂಧ್ರವಾಗಿದೆ ಎಂದುಕೊಂಡು ಚಂಟಲ್, ಜಿಮ್ ನಲ್ಲಿ ಕಸರತ್ತು ಮುಗಿಸಿ ಹೊರಟು ಹೋಗಿದ್ದಾಳೆ.

ಎರಡು ದಿನಗಳ ನಂತರ ಮನೆಕೆಲಸದವಳಿಂದ ಚಂಟಲ್ ಗೆ ಬೆಚ್ಚಿಬೀಳಿಸುವಂತಹ ಮೆಸೇಜ್ ಬಂದಿತ್ತು. ಜಿಮ್ ನಲ್ಲಿ ಬೃಹತ್ ಗಾತ್ರದ ಹಾವೊಂದು ಅಡಗಿ ಮಲಗಿದೆ ಅಂತಾ ಕೆಲಸದಾಕೆ ಮೆಸೇಜ್ ಕಳಿಸಿದ್ಲು. ಆ ಹಾವು ಬಿದ್ದ ರಭಸಕ್ಕೆ ಜಿಮ್ ನ ಛಾವಣಿಯಲ್ಲಿ ದೊಡ್ಡ ರಂಧ್ರವಾಗಿತ್ತು.

ಅದೇ ಜಿಮ್ ನಲ್ಲಿ ಚಂಟನ್ ಎರಡು ದಿನ ಕ್ಲಾಸ್ ನಡೆಸಿದ್ದಾಳೆ. ಎಲ್ಲರಿಗೂ ವ್ಯಾಯಾಮ ಹೇಳಿಕೊಟ್ಟಿದ್ದಾಳೆ. ಆದ್ರೆ ಹಾವು ಮಾತ್ರ ಯಾರಿಗೂ ತೊಂದರೆ ಮಾಡಿಲ್ಲ. ತನ್ನ ಪಾಡಿಗೆ ತಾನು ಮಲಗಿತ್ತು. ಮೇಲಿಂದ ಬಿದ್ದ ರಭಸಕ್ಕೆ ಹಾವಿಗೆ ಸ್ವಲ್ಪ ಪೆಟ್ಟಾಗಿದೆ ಎನ್ನಲಾಗ್ತಾ ಇದೆ. ಅದೇನೇ ಆದ್ರೂ ಅದೃಷ್ಟವಶಾತ್ ಹಾವಿನಿಂದ ಪಾರಾಗಿದ್ದೇನೆ ಅಂತಾ ಆಸ್ಟ್ರೇಲಿಯಾದ ಮಹಿಳೆ ನಿಟ್ಟುಸಿರು ಬಿಟ್ಟಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...